ರೆಸ್ಟೋರೆಂಟ್ ಶೈಲಿಯ ಕಾರ್ನ್ ಸೂಪ್ ಮನೆಯಲ್ಲೇ ಸವಿಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೋಟೆಲ್‌ಗಳಿಗೆ ತೆರಳಿದಾಗ ಅನೇಕರಿಗೆ ಊಟಕ್ಕಿಂತ ಆ ಸೂಪ್‌ ಆಯ್ಕೆಯ ಮೇಲೆಯೇ ಹೆಚ್ಚು ಗಮನ ಇರತ್ತೆ. ಅಂತಹವರಿಗಾಗಿ ಒಂದೊಳ್ಳೆ ರೆಸಿಪಿ ಇಲ್ಲಿದೆ.

ಸೂಪ್‌ ಪ್ರಿಯರು ರೆಸ್ಟೋರೆಂಟ್‌ ಶೈಲಿಯ ಕಾರ್ನ್‌ ಸೂಪ್‌ ಅನ್ನು ಮನೆಯಲ್ಲೇ ಮಾಡಿ ಸವಿದು ನೋಡಿ. ಹಾಗಿದ್ದರೆ ಇದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ.

ಬೇಕಾಗುವ ಸಾಮಗ್ರಿಗಳು:

ಸ್ವೀಟ್ ಕಾರ್ನ್
ಸಣ್ಣಗೆ ಹೆಚ್ಚಿದ ಶುಂಠಿ
ಸಣ್ಣಗೆ ಹೆಚ್ಚಿದ ಕ್ಯಾರೆಟ್
ವಿನೇಗರ್
ಬೆಣ್ಣೆ
ಬೆಳ್ಳುಳ್ಳಿ
ಸ್ಪ್ರಿಂಗ್ ಆನಿಯನ್
ಜೋಳದ ಹಿಟ್ಟು
ಬ್ಲ್ಯಾಕ್ ಪೆಪ್ಪರ್
ಉಪ್ಪು

ಮಾಡುವ ವಿಧಾನ:

* ಮೊದಲಿಗೆ ಒಂದು ಪ್ಯಾನ್‌ನಲ್ಲಿ ಬೆಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಬೆಣ್ಣೆ ಕರಗಿದ ಬಳಿಕ ಅದಕ್ಕೆ ಹೆಚ್ಚಿದ ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಹಾಕಿಕೊಂಡು ಅದರ ಹಸಿವಾಸನೆ ಹೋಗುವವರೆಗೂ ಬಾಡಿಸಿಕೊಳ್ಳಿ. * ನಂತರ ಅದಕ್ಕೆ ಸ್ವಲ್ಪ ಸ್ಪ್ರಿಂಗ್ ಆನಿಯನ್ ಹಾಕಿ ತಿರುವಿಕೊಳ್ಳಬೇಕು. ಈಗ ಅದಕ್ಕೆ ಕಾಲು ಕಪ್ ಸ್ವೀಟ್ ಕಾರ್ನ್ ಹಾಗೂ ಕ್ಯಾರೆಟ್ ಅನ್ನು ಹಾಕಿಕೊಂಡು 3 ರಿಂದ 4 ನಿಮಿಷಗಳವರೆಗೆ ಫ್ರೈ ಮಾಡಿ.

* ಬಳಿಕ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ತಿರುವಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಉಳಿದ ಜೋಳವನ್ನು ಹಾಕಿಕೊಂಡು ಅದಕ್ಕೆ ನೀರನ್ನು ಸೇರಿಸಿಕೊಳ್ಳಿ. ಈಗ ಅದನ್ನು ದಪ್ಪ ಪೇಸ್ಟ್ ಆಗುವಂತೆ ಚನ್ನಾಗಿ ರುಬ್ಬಿಕೊಳ್ಳಬೇಕು.

* ರುಬ್ಬಿದ ಪೇಸ್ಟ್ ಅನ್ನು ಪ್ಯಾನ್‌ಗೆ ತರಕಾರಿ ಫ್ರೈ ಮಾಡಿರುವ ಪ್ಯಾನ್‌ಗೆ ಹಾಕಿಕೊಂಡು 3 ರಿಂದ 4 ನಿಮಿಷಗಳ ಕಾಲ ಚನ್ನಾಗಿ ತಿರುವಿಕೊಳ್ಳಿ. ಬಳಿಕ ಇದಕ್ಕೆನೀರನ್ನು ಸೇರಿಸಿಕೊಂಡು ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಒಂದು ಮುಚ್ಚಳದ ಸಹಾಯದಿಂದ ಇದನ್ನು ಮುಚ್ಚಿ 10 ರಿಂದ 12 ನಿಮಿಷಗಳವರೆಗೆ ಬೇಯಿಸಿಕೊಳ್ಳಿ. ಈಗ ಇದಕ್ಕೆ ಜೋಳದ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮತ್ತೆ 5 ನಿಮಿಷಗಳವರೆಗೆ ಕುದಿಸಿಕೊಳ್ಳಿ.

* ಕೊನೆಯಲ್ಲಿ ಇದಕ್ಕೆ ವಿನೇಗರ್ ಬ್ಲ್ಯಾಕ್ ಪೆಪ್ಪರ್ ಪೌಡರ್ ಹಾಗೂ ಉಳಿದ ಸ್ಪ್ರಿಂಗ್ ಆನಿಯನ್ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ. ಈಗ ಕಾರ್ನ್ ಸೂಪ್ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!