Friday, June 2, 2023

Latest Posts

ಹೊಸ ವಿದೇಶಿ ವ್ಯಾಪಾರ ನೀತಿ ಘೋಷಣೆ: 2030ಕ್ಕೆ 2 ಟ್ರಿಲಿಯನ್‌ ಡಾಲರ್‌ ರಫ್ತು ಸಾಧಿಸುವ ಗುರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶುಕ್ರವಾರ ಭಾರತವು ತನ್ನ ಹೊಸ ವಿದೇಶಿ ವ್ಯಾಪಾರ ನೀತಿ (FTP)ಯನ್ನು ಘೋಷಿಸಿದೆ. 2030ರ ವೇಳೆಗೆ ದೇಶದ ಒಟ್ಟಾರೆ ರಫ್ತನ್ನು 2 ಟ್ರಿಲಿಯನ್‌ ಡಾಲರ್‌ ಗೆ ಏರಿಸುವ ಗುರಿಯನ್ನು ಈ ಹೊಸ ವಿದೇಶಿ ವ್ಯಾಪಾರಿ ನೀತಿಯು ಹೊಂದಿದೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ ಪ್ರೋತ್ಸಾಹಕ ಆಧಾರಿತ ಆಡಳಿತದಿಂದ ಉಪಶಮನ ಮತ್ತು ಅರ್ಹತೆ ಆಧಾರಿತ ನೀತಿ ಅಳವಡಿಕೆಗೆ ಇದು ಪ್ರಸ್ತಾಪಿಸಿದೆ. ಇದು ಏಪ್ರಿಲ್‌ 1, 2023ರಿಂದ ಜಾರಿಗೆ ಬರಲಿದೆ.

ಈ ಬಾರಿ 5 ವರ್ಷದ ಬದಲಾಗಿ ದೀರ್ಘಕಾಲದವರೆಗೆ ಅನುಸರಿಸಬಹುದಾದ ವಿದೇಶಿ ವ್ಯಾಪಾರ ನೀತಿಯನ್ನು ಪರಿಚಯಿಸಲಾಗಿದ್ದು ಇದಕ್ಕೆ ಕೊನೆ ದಿನಾಂಕ ಎಂಬುದಿರುವುದಿಲ್ಲ. ಕಾಲ ಕಾಲಕ್ಕೆ ತಕ್ಕಂತೆ ಅಗತ್ಯ ಬದಲಾವಣೆಗಳನ್ನು ಅಳವಡಿಸಿಕೊಳ್ಳಲಾಗುತ್ತದ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶಕ (ಡಿಜಿಎಫ್‌ಟಿ) ಸಂತೋಷ್ ಸಾರಂಗಿ ಹೇಳಿದ್ದಾರೆ.

ಹೊಸ ವಿದೇಶಿ ವ್ಯಾಪಾರ ನೀತಿಯ ಮುಖ್ಯಾಂಶಗಳು ಹೀಗಿವೆ:

  • ಭಾರತದ ಒಟ್ಟಾರೆ ರಫ್ತನ್ನು 2030ರ ವೇಳೆ 2 ಟ್ರಿಲಿಯನ್‌ ಡಾಲರ್‌ ಗೆ ಏರಿಸುವ ಗುರಿ.
  • 2023-24ನೇ ಆರ್ಥಿಕ ವರ್ಷದಲ್ಲಿ 765 ಬಿಲಿಯನ್‌ ಡಾಲರ್ ಮೌಲ್ಯದ ರಫ್ತು ದಾಖಲಿಸುವ ಗುರಿ
  • ಡಾಲರ್‌ ಕೊರತೆ ಎದುರಿಸುತ್ತಿರುವ ದೇಶಗಳೊಂದಿಗೆ ರೂಪಾಯಿಯಲ್ಲಿಯೇ ವ್ಯವಹಾರಕ್ಕೆ ಒಪ್ಪಿಗೆ
  • 2023ರ ವೇಳಗೆ ಇಕಾಮರ್ಸ್‌ ವ್ಯಾಪಾರವನ್ನು 300 ಬಿಲಿಯನ್‌ ಡಾಲರ್‌ ಗೆ ಏರಿಸುವ ಗುರಿ
  • ಫರೀದಾಬಾದ್‌, ಮೊರಾದಾಬಾದ್‌, ಮಿರ್ಜಾಪುರ, ವಾರಾಣಸಿಗಳನ್ನು ನೂತನ ರಫ್ತು ಕೇಂದ್ರಗಳಾಗಿ ಘೋಷಣೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!