ಬಾಲಿವುಡ್ ಸೇರಿದ ಸಂಪ್ರದಾಯಿಕ ʻಬತುಕಮ್ಮʼ: ಸಲ್ಮಾನ್ ಖಾನ್ ಸಿನಿಮಾದಲ್ಲಿ ತೆಲಂಗಾಣ ಹಾಡು ಸೂಪರ್ ಹಿಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಹೀರೋ ಸಲ್ಮಾನ್ ಖಾನ್ ಅವರ ಇತ್ತೀಚಿನ ಚಿತ್ರ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಈಗಾಗಲೇ ಪ್ರೇಕ್ಷಕರಲ್ಲಿ ಉತ್ತಮ ಕ್ರೇಜ್ ಕ್ರಿಯೇಟ್ ಮಾಡಿದೆ. ಚಿತ್ರತಂಡ ಈ ಸಿನಿಮಾವನ್ನು ಕಂಪ್ಲೀಟ್ ಕಾಮಿಡಿ ಫ್ಯಾಮಿಲಿ ಎಂಟರ್ ಟೈನರ್ ಆಗಿ ಮಾಡಿದ್ದು, ತೆಲುಗು ಹೀರೋ ವಿಕ್ಟರಿ ವೆಂಕಟೇಶ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿರುವುದರಿಂದ ಈ ಸಿನಿಮಾದ ಮೇಲೆ ಬಾಲಿವುಡ್ ಮಾತ್ರವಲ್ಲದೆ ತೆಲುಗಿನಲ್ಲೂ ಒಳ್ಳೆಯ ನಿರೀಕ್ಷೆಗಳಿವೆ. ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಗಳು ಸಿನಿಮಾದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇತ್ತೀಚೆಗಷ್ಟೇ ಚಿತ್ರತಂಡ ಈ ಚಿತ್ರದ ಬಗ್ಗೆ ರೋಚಕವಾದ ಅಪ್‌ಡೇಟ್‌ ನೀಡಿದೆ. ಈ ಚಿತ್ರದ ‘ಬತುಕಮ್ಮ’ ಹಾಡು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ತೆಲಂಗಾಣದ ಸಾಂಪ್ರದಾಯಿಕ ಹಬ್ಬವಾದ ಬತುಕಮ್ಮವನ್ನು ತೋರಿಸುವ ಹಾಡನ್ನು ಚಿತ್ರತಂಡ ರಚಿಸಿದೆ. ಇಲ್ಲಿ ಇನ್ನೊಂದು ವಿಶೇಷವೆಂದರೆ ಈ ಹಾಡಿನ ಸಾಹಿತ್ಯವೂ ತೆಲುಗಿನಲ್ಲೇ ಇದೆ. ಈ ಹಾಡಿನಲ್ಲಿ ವಿಕ್ಟರಿ ವೆಂಕಟೇಶ್ ಜೊತೆಗೆ ಪೂಜಾ ಹೆಗಡೆ ಕೂಡ ಕಾಣಿಸಿಕೊಂಡಿದ್ದಾರೆ.

ಪೂಜಾ ಹೆಗಡೆ ಬತುಕಮ್ಮ ಹಾಡಿಗೆ ದಾಂಡಿಯಾ ಸ್ಟೆಪ್ ಹಾಕಿದ್ದು ಕಂಡು ಬಂತು. ಸಲ್ಮಾನ್ ಖಾನ್ ಕೂಡ ಪಂಚೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಥ್ರಿಲ್ ಮಾಡಿದ್ದಾರೆ. ಈ ಚಿತ್ರವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸುತ್ತಿದ್ದಾರೆ ಮತ್ತು ಇದು ತಮಿಳಿನ ಸೂಪರ್ ಹಿಟ್ ಚಿತ್ರ ‘ವೀರಂ’ ನ ಹಿಂದಿ ರಿಮೇಕ್ ಆಗಿದೆ. ಕೆಜೆಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಏಪ್ರಿಲ್ 21 ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!