August 17, 2026
Monday, August 17, 2026
spot_img

2027ರ ಏಕದಿನ ವಿಶ್ವಕಪ್‌ಗೆ ಹೊಸ ಸ್ವರೂಪ: ಐಸಿಸಿ ‘ಸೂಪರ್ ಸೀರೀಸ್’ ನಿಯಮಕ್ಕೆ ಅಸೋಸಿಯೇಟ್ ದೇಶಗಳ ವಿರೋಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪರಿಚಯಿಸಿರುವ ಹೊಸ ‘ಸೂಪರ್ ಸೀರೀಸ್’ ನಿಯಮವು ಅಸೋಸಿಯೇಟ್ ಕ್ರಿಕೆಟ್ ರಾಷ್ಟ್ರಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಏನಿದು ಹೊಸ ‘ಸೂಪರ್ ಸೀರೀಸ್’ ನಿಯಮ?

ಟೂರ್ನಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ ಎಂದು ಘೋಷಿಸಲಾಗಿದ್ದರೂ, ರ‍್ಯಾಂಕಿಂಗ್‌ನಲ್ಲಿ ಕೊನೆಯ ಮೂರು (12, 13, ಮತ್ತು 14ನೇ) ಸ್ಥಾನ ಪಡೆಯುವ ತಂಡಗಳು ನೇರವಾಗಿ ಮುಖ್ಯ ಲೀಗ್ ಹಂತ ಪ್ರವೇಶಿಸುವುದಿಲ್ಲ. ಬದಲಾಗಿ, ಈ ಮೂರು ತಂಡಗಳ ನಡುವೆ ‘ಸೂಪರ್ ಸೀರೀಸ್’ ಎಂಬ ಪ್ರಾಥಮಿಕ ತ್ರಿಕೋನ ಸರಣಿ ನಡೆಯಲಿದ್ದು, ಇದರಲ್ಲಿ ಗೆದ್ದ ಒಂದು ತಂಡ ಮಾತ್ರ ಮುಂದಿನ ಹಂತಕ್ಕೆ ತಲುಪಲಿದೆ. ಅಂದರೆ, ಅರ್ಹತೆ ಪಡೆದರೂ 2 ತಂಡಗಳು ಕೇವಲ 2 ಪಂದ್ಯಗಳನ್ನಷ್ಟೇ ಆಡಿ ಹೊರಬೀಳಬೇಕಾಗುತ್ತದೆ.

ಅಸೋಸಿಯೇಟ್ ರಾಷ್ಟ್ರಗಳ ವಿರೋಧಕ್ಕೆ ಕಾರಣ

ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ನೆದರ್ಲೆಂಡ್ಸ್ ಹಾಗೂ ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿಗಳು ಜಂಟಿ ಆಕ್ಷೇಪ ವ್ಯಕ್ತಪಡಿಸಿವೆ. ವರ್ಷಗಟ್ಟಲೆ ‘ಕ್ರಿಕೆಟ್ ವಿಶ್ವಕಪ್ ಲೀಗ್ 2’ ನಂತಹ ಕಠಿಣ ಸರಣಿಗಳಲ್ಲಿ ಶ್ರಮಿಸಿ ವಿಶ್ವಕಪ್ ಕನಸು ಕಾಣುವ ಆಟಗಾರರ ಹಿತಾಸಕ್ತಿಗೆ ಇದು ಧಕ್ಕೆ ತರುತ್ತದೆ ಎಂದು ಒಮಾನ್, ಯುಎಇ, ಯುಎಸ್ಎ ಮತ್ತು ನೇಪಾಳ ಮಂಡಳಿಗಳು ಕಳವಳ ವ್ಯಕ್ತಪಡಿಸಿವೆ. ಜಾಗತಿಕ ಕ್ರಿಕೆಟಿಗರ ಒಕ್ಕೂಟ ಕೂಡ ಅಸೋಸಿಯೇಟ್ ದೇಶಗಳ ಬೆಂಬಲಕ್ಕೆ ನಿಂತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !