February 13, 2026
Friday, February 13, 2026
spot_img

New Income Tax Rules | ಪ್ಯಾನ್ ಬಳಕೆಗೆ ಹೊಸ ಮಿತಿ: ಏಪ್ರಿಲ್ 1ರಿಂದ ಈ ಎಲ್ಲಾ ಬದಲಾವಣೆ ಆಗುತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರ ಆದಾಯ ತೆರಿಗೆ ಕಾನೂನಿನಲ್ಲಿ ಹಲವು ಬದಲಾವಣೆಗಳನ್ನು ತರಲು ಮುಂದಾಗಿದ್ದು, ಹೊಸ ಕರಡು ನಿಯಮಗಳನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಬಿಡುಗಡೆ ಮಾಡಿದೆ. ಈ ನಿಯಮಗಳು ಅಂತಿಮಗೊಂಡ ಬಳಿಕ 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಪ್ರಸ್ತಾಪಿತ ಬದಲಾವಣೆಗಳಲ್ಲಿ ಪ್ಯಾನ್ ಬಳಕೆಗೆ ಸಂಬಂಧಿಸಿದ ಹಲವು ಮಿತಿಗಳ ಪರಿಷ್ಕರಣೆ ಗಮನಸೆಳೆಯುತ್ತಿದೆ.

ಹೊಸ ನಿಯಮಗಳ ಪ್ರಕಾರ, ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಠೇವಣಿ ಅಥವಾ ವಿತ್‌ಡ್ರಾ ಮಾಡಿದರೆ ಪ್ಯಾನ್ ವಿವರ ನೀಡುವುದು ಕಡ್ಡಾಯವಾಗಲಿದೆ.

ವಾಹನ ಖರೀದಿಯಲ್ಲಿ 5 ಲಕ್ಷ ರೂಪಾಯಿಗಿಂತ ಹೆಚ್ಚು ಮೌಲ್ಯದ ವ್ಯವಹಾರಗಳಿಗಷ್ಟೇ ಪ್ಯಾನ್ ಅಗತ್ಯವಾಗುವಂತೆ ಮಿತಿ ಹೆಚ್ಚಿಸಲು ಸಲಹೆ ನೀಡಲಾಗಿದೆ.

ಹೋಟೆಲ್, ಸಭಾಂಗಣ ಮತ್ತು ಈವೆಂಟ್ ಸೇವೆಗಳ ಪಾವತಿಯಲ್ಲಿ ಈಗಿರುವ 50,000 ರೂ ಮಿತಿಯನ್ನು 1 ಲಕ್ಷ ರೂಗೆ ಏರಿಸುವ ಯೋಚನೆಯಿದೆ.

ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಪ್ಯಾನ್ ನೀಡುವ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂಗೆ ಹೆಚ್ಚಿಸುವ ಪ್ರಸ್ತಾಪವೂ ಇದೆ.

ಇದೇ ವೇಳೆ ಇನ್ಷೂರೆನ್ಸ್ ಪಾಲಿಸಿ ಪಡೆಯುವಾಗಲೇ ಪ್ಯಾನ್ ಕಡ್ಡಾಯಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಿಯಮಗಳನ್ನು ಸರಳಗೊಳಿಸಿ ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ನೀಡುವ ಉದ್ದೇಶ ಸರ್ಕಾರದದ್ದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !