1954ರಲ್ಲಿ ಆರಂಭವಾಗಿದ್ದ ‘ನ್ಯೂ ಕೃಷ್ಣ ಭವನ್’ ಶೀಘ್ರದಲ್ಲೇ ಕ್ಲೋಸ್, ಭಾವುಕವಾದ ಜನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕ ವಯಸ್ಸಿನಿಂದ ನೀವು ಹೋಗುತ್ತಿದ್ದ ಫೇವರೆಟ್ ಹೊಟೇಲ್ ಏಕಾಏಕಿ ಮುಚ್ಚಿಬಿಟ್ರೆ ಬೇಜಾರಾಗೋದಿಲ್ವಾ? ಮತ್ತದೇ ಕುರ್ಚಿ, ಅದೇ ಇಡ್ಲಿ ತಿನ್ನೋಕೆ ಆಗೋದಿಲ್ಲ ಅನ್ನೋ ನೋವು ಕಾಡೋದಿಲ್ವಾ?

ಇದೇ ಬೇಸರದಲ್ಲಿದ್ದಾರೆ ಬೆಂಗಳೂರು ಮಂದಿ, ಜನರ ನೆಚ್ಚಿನ ‘ನ್ಯೂ ಕೃಷ್ಣ ಭವನ್’ ಶೀಘ್ರದಲ್ಲೇ ಮುಚ್ಚಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜನ ಭಾವುಕವಾದ ಸಂದೇಶಗಳನ್ನು ಹಾಕಿಕೊಳ್ಳುತ್ತಿದ್ದಾರೆ.

1954 ರಲ್ಲಿ ಆರಂಭವಾಗಿದ್ದ ನ್ಯೂ ಕೃಷ್ಣ ಭವನ್ ಮಲ್ಲೇಶ್ವರದ ಸಂಪಿಗೆ ಥಿಯೇಟರ್ ಎದುರುಗಡೆ ಇದೆ. ಇಷ್ಟು ವರ್ಷಗಳಿಂದ ಒಂದೇ ರುಚಿ ಕೊಡುತ್ತಿರುವ ಕಾರಣ ಈಗಲೂ ಸಾಕಷ್ಟು ಜನರಿಗೆ ಈ ಹೊಟೇಲ್ ಒಂದು ‘ಭಾವನೆ’ ಯೇ ಸರಿ.

ಹೊಟೇಲ್ ಮುಂದೆ ಡಿಸೆಂಬರ್ 6 ರಂದು ನಮ್ಮ ಹೊಟೇಲ್ ಮುಚ್ಚಲಾಗುತ್ತದೆ. ಪ್ರೋತ್ಸಾಹಕ್ಕಾಗಿ ಧನ್ಯವಾದಗಳು ಎನ್ನುವ ಬೋರ್ಡ್‌ನ್ನು ಹಾಕಲಾಗಿದೆ. ಈ ಜಾಗವನ್ನು ಭೀಮಾ ಜ್ಯುವೆಲರ‍್ಸ್‌ಗೆ ನೀಡಲಾಗಿದ್ದು, ಶೀಘ್ರದಲ್ಲೇ ಭೀಮಾ ಜ್ಯುವೆಲರ‍್ಸ್ ತಲೆಯೆತ್ತಲಿದೆ.

Iconic Bengaluru restaurant New Krishna Bhavan to down shuttersಗ್ರೀನ್ ಮಸಾಲೆ ಇಡ್ಲಿ, ಬಟನ್ ಇಡ್ಲಿ ಸಾಂಬಾರ್, ಗೊಜ್ಜವಲಕ್ಕಿ, ಕೊಟ್ಟೆ ಕಡುಬು, ನೀರ್ ದೋಸೆ, ಜೋಳದ ದೋಸೆ, ರಸಂ ವಡೆ, ಮದುರೈ ಬಟನ್ ಇಡ್ಲಿ ಇಲ್ಲಿನ ಫೇವರೆಟ್ ತಿಂಡಿಗಳಾಗಿವೆ. ರೆಸ್ಟೋರೆಂಟ್ ಮುಚ್ಚುವ ಮುನ್ನ ಕಡೇ ಬಾರಿಗೆ ತಮ್ಮ ಫೇವರೆಟ್ ಐಟಮ್‌ಗಳನ್ನು ಜನ ಸವಿಯಲು ತೆರಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!