ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಗಾ ಮನೆಗೆ ಹೊಸ ಸದಸ್ಯೆಯ ಎಂಟ್ರಿ, ಅಮ್ಮನಿಗೆ ಸ್ವೀಟ್ ಸರ್ಪೈಸ್ ಕೊಟ್ಟ ರಾಗಾ, ಇದನ್ನು ಓದಿದ ತಕ್ಷಣ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ರಾಹುಲ್ ಗಾಂಧಿ ಮದುವೆ ಆಗಿಬಿಟ್ರಾ ಅಂದುಕೊಳ್ಳೋದು ಮಾಮೂಲಿ..
ಆದರೆ ವಿಷಯ ಅದಲ್ಲ, ರಾಹುಲ್ ಗಾಂಧಿ ತನ್ನ ತಾಯಿಗೆ ಮುದ್ದಾದ ನಾಯಿಮರಿಯೊಂದನ್ನು ನೀಡಿ ಸರ್ಪೈಸ್ ಕೊಟ್ಟಿದ್ದಾರೆ. ಮುದ್ದಾಗಿರುವ ನಾಯಿಮರಿಗೆ ನೂರಿ ಎಂದು ಹೆಸರಿಟ್ಟಿದ್ದು, ಗೋವಾದಿಂದ ನೂರಿಯನ್ನು ಪಡೆದಿದ್ದಾರೆ.
ಗೋವಾ ಪ್ರವಾಸಕ್ಕೆ ತೆರಳಿದ್ದ ರಾಹುಲ್ ನೂರಿ ಪಡೆದ ಕುಟುಂಬವನ್ನು ಭೇಟಿಯಾಗಿದ್ದು, ದೆಹಲಿಗೆ ಬಂದು ಗಿಫ್ಟ್ ಬಾಕ್ಸ್‌ನಲ್ಲಿ ನಾಯಿಮರಿಯನ್ನು ಇಟ್ಟುಕೊಟ್ಟಿದ್ದಾರೆ.
ಮನೆಯೊಳಗಿದ್ದ ಸೋನಿಯಾ ಗಾಂಧಿ ಅವರನ್ನು ಹೊರಗೆ ಕರೆದು ನಾಯಿಮರಿಯನ್ನು ನೀಡಿದ್ದಾರೆ, ತುಂಬಾ ಮುದ್ದಾಗಿದೆ ಎಂದು ನಾಯಿಮರಿಯದ್ದು ಸೋನಿಯಾ ಗಾಂಧಿ ಮುದ್ದು ಮಾಡಿದ್ದಾರೆ. ಇಷ್ಟು ಚಂದದ ಸರ್ಪೈಸ್ ನೀಡಿದ ಮಗನಿಗೂ ಧನ್ಯವಾದ ತಿಳಿಸಿದ್ದಾರೆ. ಖುಷಿಯಿಂದ ರಾಹುಲ್ ಕೂಡ ತಾಯಿಯ ಕೆನ್ನೆಗೆ ಮುತ್ತಿಟ್ಟಿದ್ದಾರೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ರಾಗಾ ಮುಗ್ಧತೆ ನೋಡಿ ಖುಷಿಪಟ್ಟಿದ್ದಾರೆ.