ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್‌ಬಿಐನ ಮೂರು ದಿನಗಳ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಬುಧವಾರ ಆರಂಭಗೊಂಡಿದ್ದು, ಇಂದಿನಿಂದ ಮೂರು ದಿನಗಳ ಕಾಲ ಸಭೆ ನಡೆಯಲಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.6.3ರಷ್ಟಿರುವ ಸಾಧ್ಯತೆ ಇದೆ. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿರುವ ದೊಡ್ಡ ಪ್ರಶ್ನೆಯೆಂದರೆ..ಹಣದುಬ್ಬರದ ಅಂತರವನ್ನು ಕಡಿಮೆ ಮಾಡುವುದು ಹೇಗೆ? ಮತ್ತೆ ಬಡ್ಡಿದರಗಳನ್ನು ಹೆಚ್ಚಿಸುವ ಸಮಯ ಬಂದಿದೆಯೇ? RBI ಮತ್ತೊಮ್ಮೆ ಬಡ್ಡಿದರಗಳನ್ನು ಫ್ರೀಜಿಂಗ್ ವಲಯದಲ್ಲಿ ಇರಿಸಲಿದೆಯೇ? ಇಂತಹ ಎಲ್ಲಾ ಪ್ರಶ್ನೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಆರ್‌ಬಿಐ ಎಂಪಿಸಿ ಸಭೆ ಅಕ್ಟೋಬರ್ 6ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಎಸ್‌ಬಿಐ ರಿಸರ್ಚ್ ಪ್ರಕಾರ, ಭಾರತೀಯ ಸೆಂಟ್ರಲ್ ಬ್ಯಾಂಕ್ ಈ ವಾರ ಮತ್ತೆ ಪ್ರಮುಖ ರೆಪೋ ದರವನ್ನು ವಿರಾಮಗೊಳಿಸುವ ನಿರೀಕ್ಷೆಯಿದೆ. ಆರ್‌ಬಿಐ ತನ್ನ ಹಿಂದಿನ ಮೂರು ಸಭೆಗಳಲ್ಲಿ – ಏಪ್ರಿಲ್, ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ ರೆಪೋ ದರವನ್ನು ಶೇಕಡಾ 6.5ರಷ್ಟೇ ಉಳಿಸಿಕೊಂಡು ಬಂದಿದೆ.
ಇನ್ಫಾರ್ಮೆರಿಕ್ಸ್ ರೇಟಿಂಗ್ಸ್ ಸಹ ಆರ್‌ಬಿಐ ಸತತ ನಾಲ್ಕನೇ ಬಾರಿಗೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.