September 14, 2026
Monday, September 14, 2026
spot_img

ಭಾರತದ ಮಹಿಳಾ ಹಾಕಿ ತಂಡಕ್ಕೆ ಹೊಸ ಮಿಷನ್: ಟೋಕಿಯೊದಲ್ಲಿ ಪದಕ ಮಿಸ್ ಆದ್ರೂ, ಲಾಸ್ ಏಂಜಲೀಸ್‌ನಲ್ಲಿ ಗೆಲ್ಲುವ ವಿಶ್ವಾಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್‌ ಸ್ಜೋರ್ಡ್ ಮರಿಜ್ನೆ 2028ರ ಲಾಸ್ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಪದಕ ತಂದುಕೊಡುವುದೇ ತಮ್ಮ ಪ್ರಮುಖ ಗುರಿ ಎಂದು ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಸನಿಹಕ್ಕೆ ಬಂದ ಅನುಭವವೇ ಈ ಬಾರಿ ತಂಡಕ್ಕೆ ದೊಡ್ಡ ಪ್ರೇರಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಟೋಕಿಯೊ ಅನುಭವವೇ ಶಕ್ತಿ

2017ರಿಂದ 2021ರವರೆಗೆ ತಂಡವನ್ನು ಮುನ್ನಡೆಸಿದ್ದ ಮರಿಜ್ನೆ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಮೊದಲ ಬಾರಿಗೆ ಸೆಮಿಫೈನಲ್‌ಗೆ ಕೊಂಡೊಯ್ದಿದ್ದರು. ಈ ಸಾಧನೆಯು ಮಹಿಳಾ ಹಾಕಿಗೆ ಹೊಸ ಆತ್ಮವಿಶ್ವಾಸ ತುಂಬಿತ್ತು.

ಇದನ್ನೂ ಓದಿ:

ದೀರ್ಘಾವಧಿ ಯೋಜನೆಗೆ ಒತ್ತು

ಒಲಿಂಪಿಕ್ಸ್‌ ಯಶಸ್ಸಿಗಾಗಿ ಏಷ್ಯನ್ ಗೇಮ್ಸ್‌, ವಿಶ್ವಕಪ್‌, ಎಫ್‌ಐಎಚ್‌ ಪ್ರೊ ಲೀಗ್‌ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುವುದು ಅಗತ್ಯ ಎಂದು ಕೋಚ್‌ ಅಭಿಪ್ರಾಯಪಟ್ಟಿದ್ದಾರೆ.

ಯುವ ಆಟಗಾರ್ತಿಯರ ಮೇಲೂ ಭರವಸೆ

ಅನುಭವಿ ಆಟಗಾರ್ತಿಯರ ಜೊತೆಗೆ ಯುವ ಪ್ರತಿಭೆಗಳನ್ನು ಬೆಳೆಸುವುದು, ತಂಡದಲ್ಲಿ ಆರೋಗ್ಯಕರ ಸ್ಪರ್ಧೆ ಮೂಡಿಸುವುದು ಹಾಗೂ ಮಾನಸಿಕ ದೃಢತೆಯನ್ನು ಹೆಚ್ಚಿಸುವುದು ಮುಂದಿನ ಮೂರು ವರ್ಷಗಳ ಪ್ರಮುಖ ಗುರಿಯಾಗಿದೆ ಎಂದು ಮರಿಜ್ನೆ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !