Sunday, June 26, 2022

Latest Posts

RRR ಚಿತ್ರ ಬಿಡುಗಡೆಗೆ ಹೊಸ ಮುಹೂರ್ತ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಆರ್​ಆರ್​ಆರ್​ ಚಿತ್ರ ಬಿಡುಗಡೆ ದಿನಾಂಕದಲ್ಲಿ ಮತ್ತೊಮ್ಮೆ ಬದಲಾವಣೆಯಾಗಿದ್ದು, ಇದೀಗ ಮಾರ್ಚ್​​ 25ರಂದು ತೆರೆಗೆ ಬರಲಿದೆ.
ಈ ಕುರಿತು ಟ್ವಿಟರ್​ನಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡ ಚಿತ್ರ ತಂಡ, ಈ ದಿನಾಂಕದಂದು ಬಿಡುಗಡೆಯಾಗುವುದು ಖಚಿತ​ ಎಂದು ತಿಳಿಸಿದೆ.
ಈಗಾಗಲೇ ಹಲವು ಬಾರಿ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಿದ್ದ ಚಿತ್ರತಂಡ ಇದೀಗ ಮತ್ತೊಂದು ಹೊಸ ದಿನಾಂಕವನ್ನು ಅಭಿಮಾನಿಗಳ ಮುಂದಿಟ್ಟಿದೆ.ಈ ಹಿಂದೆ ಚಿತ್ರ ಬಿಡುಗಡೆ ಮಾಡಲು ಮಾರ್ಚ್​ 28 ಇಲ್ಲವೇ ಏಪ್ರಿಲ್​​ 28ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಹೊಸ ದಿನಾಂಕ ಬಹಿರಂಗ ಮಾಡಿದೆ.
ಈ ಬಿಗ್ ಬಜೆಟ್ ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಹಾಗೂ ಜೂ.ಎನ್‌ಟಿಆರ್ ಕೋಮರಂ ಭೀಮನಾಗಿ ನಟಿಸಿದ್ದಾರೆ. ನಾಯಕಿಯರಾಗಿ ಆಲಿಯಾ ಭಟ್ ಮತ್ತು ಒಲಿವಿಯಾ ಮೋರಿಸ್ ನಟಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss