ಪುನೀತ್‌ ನಟನೆಯ ಕೊನೆಯ ಚಿತ್ರ ʼಜೇಮ್ಸ್ʼ:‌ ಹೊಸ ಪೋಸ್ಟರ್‌ ರಿಲೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಕೊನೆಯ ಚಿತ್ರ ಜೇಮ್ಸ್‌ ನ ಹೊಸ ಪೋಸ್ಟರ್‌ ಇಂದು ಬಿಡುಗಡೆಯಾಗಿದೆ.
ಗಣರಾಜ್ಯೋತ್ಸವದ ಪ್ರಯುಕ್ತ ಚಿತ್ರತಂಡ ಪುನೀತ್‌ ಅವರ ವಿಶೇಷ ಪೋಸ್ಟರ್‌ ಅನ್ನು ರಿಲೀಸ್‌ ಮಾಡಿದ್ದು, ಅಪ್ಪುವನ್ನು ಕಂಡ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟರ್‌ ನಲ್ಲಿ ಸಲಾಂ ಸೋಲ್ಜರ್‌ ದೇಶಕ್ಕೆ ನೀನೆ ಪವರ್‌ ಎಂಬ ಸ್ಲೋಗನ್‌ ಕೊಡಲಾಗಿದೆ. ಇದರಲ್ಲಿ ಪುನೀತ್‌ ಗನ್‌ ಹಿಡಿದು ಯುದ್ಧಕ್ಕೆ ತೆರಳುತ್ತಿರುವ ಯೋಧನಂತೆ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ಚೇತನ್‌ ಕುಮಾರ್‌ ನಿರ್ದೇಶನ ಮಾಡಿದ್ದು, ಪ್ರಿಯಾ ಆನಂದ್‌ ಅವರು ಪುನೀತ್‌ ಗೆ ಜೋಡಿಯಾಗಿ ಜೇಮ್ಸ್‌ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚರಣ್‌ ರಾಜ್‌ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು, ಪುನೀತ್‌ ಸೋದರರಾದ ರಾಘವೇಂದ್ರ ರಾಜ್‌ ಕುಮಾರ್‌ ಹಾಗೂ ಶಿವರಾಜ್‌ ಕುಮಾರ್‌ ಜೇಮ್ಸ್‌ ಚಿತ್ರದಲ್ಲಿ ವಿಶೇಷವಾಗಿ ಎಂಟ್ರಿ ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!