ಗಾಯಕ ಸೋನು ನಿಗಮ್‌ಗೆ ಒಲಿದು ಬಂದ ಪದ್ಮಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮ ಕಂಠದಿಂದಲೇ ಜನರ ಅಭಿಮಾನ ಗಳಿಸಿರುವ ಸೋನು ನಿಗಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಕನ್ನಡ, ಹಿಂದಿ, ಪಂಜಾಬಿ, ತೆಲುಗು, ತಮಿಳು, ಮಲಯಾಳಂ, ಮರಾಠಿ ಭಾಷೆಗಳಲ್ಲಿ ಸೋನು ತಮ್ಮ ಛಾಪನ್ನು ಮೂಡಿಸಿದ್ದಾರೆ. ಹಲವಾರು ಆಲ್ಬಂಗಳನ್ನು ಸೋನು ತೆರೆಗೆ ತಂದಿದ್ದು, ಕೆಲ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.

ಆಧುನಿಕ ಮೊಹಮ್ಮದ್ ರಫಿ ಎಂದೇ ಬಿರುದು ಹೊಂದಿರುವ ಸೋನು ಕಂಠಕ್ಕೆ ಮರುಳಾಗದವರೇ ಇಲ್ಲ. 50 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿರುವ ಸೋನು ನಿಗಮ್‌ಗೆ ಇದೀಗ ಪದ್ಮಶ್ರೀ ಒಲಿದಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!