ಹೊಸ ಭತ್ತದ ಬೆಳೆ: ಒಮ್ಮೆ ನಾಟಿ ಮಾಡಿದರೆ 4 ವರ್ಷ ಫಸಲು ನೀಡುವ ಬೆಳೆ ಅಭಿವೃದ್ಧಿಪಡಿಸಿದ ಚೀನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾದ ವಿಜ್ಞಾನಿಗಳು ಹೊಸ ರೀತಿಯ ಅಕ್ಕಿ ಬೆಳೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಒಮ್ಮೆ ನೆಟ್ಟರೆ ನಾಲ್ಕು ವರ್ಷ ಸತತವಾಗಿ ಬೆಳೆಯುವ ಭತ್ತ..ಅಂದರೆ ಎಂಟು ಬೆಳೆಗಳು ಸಿಗುವಂತೆ ಮಾಡಿದ್ದಾರೆ. ರೈತರು ಈಗಾಗಲೇ ಚೀನಾದಲ್ಲಿ ಈ ಭತ್ತದ ಬೆಳೆಯನ್ನು ಬೆಳೆಯುತ್ತಿದ್ದಾರೆ. ‘ಪಿಆರ್-23’ ಹೆಸರಿನ ಈ ಭತ್ತವನ್ನು ಚೀನಾದ ಯುನ್ನಾನ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಅಲ್ಲಿ ನಿಯಮಿತವಾಗಿ ಬಳಸಲಾಗುವ ಓರ್ಜ್ಯಾ ಸಟಿವಾ ಅಕ್ಕಿಯನ್ನು ಆಫ್ರಿಕಾದ ಮತ್ತೊಂದು ರೀತಿಯ ಅಕ್ಕಿಯೊಂದಿಗೆ ಹೈಬ್ರಿಡೈಸ್ ಮಾಡಿ ‘PR-23’ ಅನ್ನು ರಚಿಸಲಾಯಿತು. ಈ ಭತ್ತವನ್ನು ಒಮ್ಮೆ ನೆಟ್ಟರೆ ಸಾಕು. ಕನಿಷ್ಠ ನಾಲ್ಕು ವರ್ಷಗಳಲ್ಲಿ ಎಂಟು ಬಾರಿ ಭತ್ತದ ಕೊಯ್ಲು ಬರುತ್ತದೆ. ಮೇಲಾಗಿ ಸಾಮಾನ್ಯ ಭತ್ತಕ್ಕೆ ಹೋಲಿಸಿದರೆ ಇಳುವರಿಯೂ ಹೆಚ್ಚು ಎನ್ನುತ್ತಾರೆ ವಿಜ್ಞಾನಿಗಳು. ಭತ್ತದ ಸರಾಸರಿ ಇಳುವರಿ ಹೆಕ್ಟೇರಿಗೆ 6.8 ಟನ್. ಜೊತೆಗೆ ಈ ಬೆಳೆಗೆ ತಗಲುವ ವೆಚ್ಚವೂ ತೀರಾ ಕಡಿಮೆ. ಏಕೆಂದರೆ ಒಮ್ಮೆ ನೆಟ್ಟರೆ ಇನ್ನೂ ಏಳು ಬೆಳೆಗಳವರೆಗೆ ನಾಟಿ ವೆಚ್ಚ ಕಡಿಮೆಯಾಗುತ್ತದೆ. ಕಾರ್ಮಿಕರ ಸಮಸ್ಯೆ ಇರುವುದಿಲ್ಲ. ಪ್ರತಿ ಬಾರಿ ಬೀಜಗಳನ್ನು ಖರೀದಿಸುವ ಅಗತ್ಯವಿಲ್ಲ. ಅಲ್ಲದೆ ಹೆಚ್ಚಿನ ರಾಸಾಯನಿಕಗಳನ್ನು ಬಳಸುವ ಅಗತ್ಯವಿಲ್ಲ.

ಸಾಮಾನ್ಯ ಅಕ್ಕಿಗೆ ಹೋಲಿಸಿದರೆ ಈ ಭತ್ತದ ಬೆಳೆಗೆ ಕನಿಷ್ಠ 58 ಪ್ರತಿಶತದಷ್ಟು ವೆಚ್ಚ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಸಮಯ ಕಳೆದಂತೆ ಅದು ನೆಲದಲ್ಲಿ ದೃಢವಾಗಿ ಬೇರೂರುತ್ತದೆ.  ಇದರಿಂದ ಇಳುವರಿ ಹೆಚ್ಚುತ್ತದೆ. ಈ ಬೆಳೆ ರೈತರಿಗೆ ತುಂಬಾ ಪ್ರಯೋಜನಕಾರಿ. ಇದು ಪರಿಸರಕ್ಕೂ ಒಳ್ಳೆಯದು. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!