July 5, 2026
Sunday, July 5, 2026
spot_img

ಹಾರ್ಮುಜ್ ಜಲಸಂಧಿಯಲ್ಲಿ ಹೊಸ ನಿಯಮ: ಹಡಗುಗಳಿಂದ ಶುಲ್ಕ ವಸೂಲಿಗೆ ಇರಾನ್ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ವಾಣಿಜ್ಯ ಹಡಗುಗಳಿಂದ ಸೇವಾ ಶುಲ್ಕ ವಸೂಲಿ ಮಾಡುವ ಯೋಜನೆಯನ್ನು ಇರಾನ್ ಘೋಷಿಸಿದೆ. ಆದರೆ, ತಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿರುವ ರಾಷ್ಟ್ರಗಳಿಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದೆ.

ಇರಾನ್ ಅಧಿಕಾರಿಗಳ ಪ್ರಕಾರ, ಜಲಸಂಧಿಯ ಭದ್ರತೆ, ಹಡಗುಗಳ ಸುರಕ್ಷಿತ ಸಂಚಾರ ಹಾಗೂ ಪರಿಸರ ಸಂರಕ್ಷಣೆಗೆ ಅಗತ್ಯ ವ್ಯವಸ್ಥೆಗಳನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸ ವ್ಯವಸ್ಥೆಯನ್ನು ಒಮಾನ್‌ನ ಸಹಕಾರದೊಂದಿಗೆ ಜಾರಿಗೊಳಿಸುವ ಯೋಜನೆ ಇದೆ.

ಸ್ನೇಹ ರಾಷ್ಟ್ರಗಳಿಗೆ ವಿಶೇಷ ಸೌಲಭ್ಯ ಭರವಸೆ

ವಿಶ್ವದ ತೈಲ ಮತ್ತು ಎಲ್‌ಎನ್‌ಜಿ ಸಾಗಾಟದ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಈ ನಿರ್ಧಾರ ಜಾರಿಗೆ ಬಂದರೆ ಜಾಗತಿಕ ಹಡಗು ಸಂಚಾರ, ತೈಲ ವ್ಯಾಪಾರ ಹಾಗೂ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !