July 9, 2026
Thursday, July 9, 2026
spot_img

ಆನೆ ಶಿಬಿರಗಳಿಗೆ ಹೊಸ ರೂಲ್ಸ್‌: ಪ್ರವಾಸಿಗರಿಗೆ 30 ಅಡಿ ಅಂತರ ಕಡ್ಡಾಯ, ಆನೆಗಳಿಗೆ ಆಹಾರ ಕೊಡುವಂತಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ನಡೆದ ದುರಂತದಿಂದ ಎಚ್ಚೆತ್ತ ಕರ್ನಾಟಕ ಅರಣ್ಯ ಇಲಾಖೆ ಇದೇ ಮೊದಲ ಬಾರಿಗೆ ಸಮಗ್ರ ಕರ್ನಾಟಕ ಆನೆ ಶಿಬಿರ ಸುರಕ್ಷತಾ ಪ್ರೋಟೋಕಾಲ್‌ನ್ನು ಜಾರಿಗೆ ತಂದಿದೆ.

ದುಬಾರೆ ಶಿಬಿರದಲ್ಲಿ ಆನೆಯ ದಾಳಿಯಿಂದ ಪ್ರವಾಸಿಗರೊಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸುರಕ್ಷತೆಯನ್ನು ಬಲಗೊಳಿಸಲು ಪ್ರೋಟೋಕಾಲ್‌ ಜಾರಿಗೆ ತರಲಾಗಿದೆ.

ಏನಿದೆ ಪ್ರೋಟೋಕಾಲ್‌ನಲ್ಲಿ?

ಇನ್ಮುಂದೆ ಪ್ರವಾಸಿಗರು ಆನೆಗಳನ್ನು ಮುಟ್ಟುವುದು, ಸ್ನಾನ ಮಾಡಿಸುವುದು, ಊಟ ತಿನ್ನಿಸುವುದು ಬಂದ್‌. ಆನೆಗಳನ್ನು ನೋಡಲು 30 ಅಡಿ ಅಂತರ ಕಾಯ್ದುಕೊಳ್ಳಬೇಕು. ಶಿಬಿರಗಳಲ್ಲಿ ಗುರುತಿಸಲಾದ ‘ಹಸಿರು ವಲಯ’ ಅಥವಾ ವೀಕ್ಷಣಾ ಗ್ಯಾಲರಿಯಲ್ಲೇ ನಿಂತು ಆನೆಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ.

ಆನೆಗಳು ಹಾಗೂ ಪ್ರವಾಸಿಗರ ಚಟುವಟಿಕೆಗಳನ್ನು ಗಮನಿಸಲು ಎಲ್ಲೆಡೆ ಸಿಸಿಕ್ಯಾಮರಾ ದಾಖಲಿಸಲಾಗುತ್ತದೆ. ಒಂದು ಶಿಬಿರದಲ್ಲಿ ಗರಿಷ್ಠ ಹತ್ತು ಆನೆಗಳು ಮಾತ್ರ ಇರಬೇಕು. ಒಂದು ಸಮಯದಲ್ಲಿ ಗರಿಷ್ಠ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಎಂಟ್ರಿ. ಶಿಬಿರದ ಒಳಗೆ ಅರ್ಧ ಗಂಟೆ ಮಾತ್ರ ಇರಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !