July 28, 2026
Tuesday, July 28, 2026
spot_img

ಹೈದರಾಬಾದ್ ಡ್ರಗ್ಸ್ ಕೇಸ್‌ಗೂ ಬೆಂಗಳೂರಿಗೂ ಲಿಂಕ್ : ಎರಡು ಕಡೆ ಇಡಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಮಾರಾಟ ಕೇಸ್‌ಗೆ ಸಂಬಂಧಿಸಿದಂತೆ ನಗರದ ಎರಡು ಕಡೆ ಇಡಿ ಅಧಿಕಾರಿಗಳು ಜಾರಿ ನಿದೇಶನಾಲಯ ದಾಳಿ ನಡೆಸಿದ್ದಾರೆ.

ಹೈದರಾಬಾದ್ ಎನ್‌ಡಿಪಿಎಸ್ ಕೇಸ್‌ನಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ 7 ಕಡೆ ದಾಳಿ ನಡೆಸಲಾಗಿದೆ. ಇತ್ತೀಚೆಗೆ ಹೈದರಾಬಾದ್ ಪೊಲೀಸರು ಈ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದರು.

ಇತ್ತೀಚೆಗೆ ಥೈಲ್ಯಾಂಡ್‌ನಿಂದ ಹೈದರಾಬಾದ್ ವಿಮಾನ ನಿಲ್ದಾಣದ ಮೂಲಕ ವ್ಯಾಕ್ಯೂಮ್-ಸೀಲ್ಡ್ ಪ್ಯಾಕೇಜ್‌ಗಳಲ್ಲಿ ಭಾರತಕ್ಕೆ ಅಕ್ರಮವಾಗಿ 1,500 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಸಾಗಿಸುತ್ತಿರುವುದು ಪತ್ತೆಯಾಗಿತ್ತು. ಈ ಸಂಬಂಧ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಈ ಮಾದಕವಸ್ತು ಜಾಲದ ಮೂಲಕ ಗಳಿಸಲಾದ ಕೋಟ್ಯಂತರ ರೂ. ಅಕ್ರಮ ಹಣದ ವರ್ಗಾವಣೆಯ ಲಿಂಕ್‌ಗಳನ್ನು ಪತ್ತೆಹಚ್ಚಲು ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !