ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಹಾಗೂ ಬಹುನಿರೀಕ್ಷಿತ ಜೇಮ್ಸ್ ಚಿತ್ರದ ಲಿರಿಕಲ್ ವಿಡಿಯೊ ಸಾಂಗ್ ರಿಲೀಸ್ ಆಗಿದೆ.
ಇತ್ತೀಚೆಗಷ್ಟೆ ಜೇಮ್ಸ್ ನ ಟ್ರೇಡ್ ಮಾರ್ಕ್ ಲಿರಿಕಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದು, ಇದೀಗ ಹೊಸ ಹಾಡಿನ ಲಿರಿಕಲ್ ಹಾಡು ಬಿಡುಗೆಯಾಗಿದ್ದು, ಅಪ್ಪುರನ್ನು ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಸಲಾಂ ಸೋಲ್ಜರ್.. ಹಾಡಿನಲ್ಲಿ ಪುನೀತ್ ಸೈನಿಕನಂತೆ ಗೆಟಪ್ ತೊಟ್ಟಿದ್ದು, ಅವರನ್ನು ನೋಡಿದ ಅಭಿಮಾನಿಗಳು ಸಲಾಮ್ ಅಪ್ಪು ಎಂದಿದ್ದಾರೆ.
ಈ ಹಾಡನ್ನು ಪಿಆರ್ ಕೆ ಆಡಿಯೋ ಮೂಲಕ ರಿಲೀಸ್ ಮಾಡಲಾಗಿದೆ. ಯುವ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಕಿಶೋರ್ ಪತ್ತಿಕೊಂಡ ಅವರ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದ್ದು, ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇದೇ ಮಾ.17ಕ್ಕೆ ವಿಶ್ವದಾದ್ಯಂತ ಬರೋಬ್ಬರಿ 4 ಸಾವಿರ ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಜೇಮ್ಸ್ ಚಿತ್ರದ ಸೆನ್ಸಾರ್ ಕೆಲಸ ಕೂಡ ನಡೆದಿದ್ದು, ಯಾವುದೇ ಕಟ್ಸ್ ಗಳಿಲ್ಲದೆ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.
ಇನ್ನು ಅಪ್ಪು ಅಭಿಮಾನಿಗಳು ಪುನೀತ್ ನಟನೆಯ ಕೊನೆಯ ಚಿತ್ರವನ್ನು ತೆರೆ ಮೇಲೆ ನೋಡೋದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಕರ್ನಾಟಕ ಒಂದರಲ್ಲೇ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.