ಟೀಮ್‌ ಇಂಡಿಯಾದಿಂದ ಹೊರಬಿದ್ದ ಬೆನ್ನಲ್ಲೇ ಕೌಂಟಿ ಕ್ರಿಕೆಟ್‌ನತ್ತ ಮುಖಮಾಡಿದ ಪೂಜಾರ!

 

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಕಳಪೆ ಫಾರ್ಮ್‌ ಕಾರಣದಿಂದಾಗಿ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಚೇತೇಶ್ವರ ಪೂಜಾರ ಮುಂಬರುವ ಇಂಗ್ಲಿಷ್ ಕೌಂಟಿ ಋತುವಿನಲ್ಲಿ ಸಸೆಕ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.
2022ರ ಋತುವಿನಲ್ಲಿ ಸಸೆಕ್ಸ್‌ ಪರ ಪ್ರಥಮ ದರ್ಜೆ ಹಾಗೂ ಲಿಸ್ಟ್ ಎ ಪಂದ್ಯಗಳೆರಡರಲ್ಲೂ ಚೇತೇಶ್ವರ್‌ ಪೂಜಾರ ಆಡಲಿದ್ದಾರೆ ಎಂದು ಕೌಂಟಿ ಕ್ಲಬ್‌ ಪ್ರಕಟಿಸಿದೆ.
ಆಸ್ಟ್ರೇಲಿಯಾದ ಆಟಗಾರ ಟ್ರಾವಿಸ್ ಹೆಡ್ ಬದಲಿಗೆ ಪೂಜಾರ ಆಯ್ಕೆಯಾಗಿದ್ದಾರೆ. ಹೆಡ್‌ ಪ್ರಸ್ತುತ ಪಾಕ್‌ ವಿರುದ್ಧದ ಟೆಸ್ಟ್‌ ನಲ್ಲಿ ಭಾಗಿಯಾಗಿದ್ದು, ಕೌಟುಂಬಿಕ ಕಾರಣಗಳನ್ನು ನೀಡಿ ಕೌಂಟಿ ಕ್ರಿಕೆಟ್‌ ನಿಂದ ಹಿಂದೆ ಸರಿದಿದ್ದಾರೆ. ಅವರ ಸ್ಥಾನದಲ್ಲಿ ಪೂಜಾರ ಆಡಲಿದ್ದಾರೆ. ಪೂಜಾರ ಈ ಹಿಂದೆ ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಯಾರ್ಕ್‌ಷೈರ್ ಮತ್ತು ನಾಟಿಂಗ್‌ಹ್ಯಾಮ್‌ಶೈರ್‌ ತಂಡಗಳಿಗೆ ಆಡಿದ್ದರು.
ಈ ಕುರಿತು ಸಂತಸ ಹಂಚಿಕೊಂಡಿರುವ ಪೂಜಾರ, ಸಸೆಕ್ಸ್‌ ಪರ ಕಣಕ್ಕಿಳಿಯುವುದು ನನ್ನ ಪಾಲಿಗೆ ಗೌರವವಾಗಿದೆ. ಈ ಹಿಂದೆ ಕೌಂಟಿ ಕ್ರಿಕೆಟ್ ಅನ್ನು ಆನಂದಿಸಿದ್ದೇನೆ. ಆದಷ್ಟು ಬೇಗ ಕ್ಲಬ್‌ ಸೇರ್ಪಡೆಯಾಗಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಎ. 7 ರಿಂದ ಇಂಗ್ಲಿಷ್‌ ಕೌಂಟಿ ಋತು ಆರಂಭವಾಗಲಿದ್ದು, ಸಸೆಕ್ಸ್‌ ತನ್ನ ಮೊದಲ ಪಂದ್ಯವನ್ನು ಎ. 14 ರಂದು ಡರ್ಬಿಶೈರ್‌ ವಿರುದ್ಧ ಆಡಲಿದೆ. ಸೆಪ್ಟಂಬರ್‌ ತನಕ ಪಂದ್ಯಗಳು ಆಯೋಜನೆಯಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!