ರಾಣಿ ಎಲಿಜಬೆತ್ ಅವರನ್ನು ಭೇಟಿ ಮಾಡಿದ ಯುಕೆ ನೂತನ ಪ್ರಧಾನಿ ಲಿಜ್ ಟ್ರಸ್

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಅವರನ್ನು ಯುಕೆ ಪ್ರಧಾನಿ ಮತ್ತು ಖಜಾನೆಯ ಮೊದಲ ಲಾರ್ಡ್ ಆಗಿ ನೇಮಿಸಲಾಗಿದೆ.
ಲಿಜ್ ಟ್ರಸ್ ಮಂಗಳವಾರ ರಾಣಿ ಎರಡನೇ ಎಲಿಜಬೆತ್ ಭೇಟಿ ಮಾಡಿ ಸರ್ಕಾರವನ್ನು ರಚಿಸಲು ಔಪಚಾರಿಕವಾಗಿ ಕೇಳಿದರು. ಬಳಿಕ ಮಧ್ಯಾಹ್ನ ಸ್ಕಾಟ್ಲ್ಯಾಂಡ್ನ ಬಾಲ್ಮೊರಲ್ ಕ್ಯಾಸಲ್ ನಲ್ಲಿ ಅಧಿಕಾರ ವಹಿಸಿಕೊಂಡರು.
ರಾಣಿ ಎಲಿಜಬೆತ್ ಅವರ 70 ವರ್ಷಗಳ ಆಳ್ವಿಕೆಯಲ್ಲಿ ಇದೇ ಮೊದಲ ಬಾರಿಗೆ ಅಧಿಕಾರ ಹಸ್ತಾಂತರವು ಲಂಡನ್ ನ ಬಕಿಂಗ್ಹ್ಯಾಮ್ ಅರಮನೆಗಿಂತ ಹೆಚ್ಚಾಗಿ ಬಾಲ್ಮೋರಲ್ನಲ್ಲಿ ನಡೆಯಿತು.
ಮಾರ್ಗರೆಟ್ ಥ್ಯಾಚರ್ ಮತ್ತು ತೆರೇಸಾ ಮೇ ಅವರ ನಂತರ ಲಿಜ್ ಟ್ರಸ್ ಬ್ರಿಟನ್ ನ ಮೂರನೇ ಮಹಿಳಾ ಪ್ರಧಾನಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!