ಕೆಎಸ್‌ಸಿಎ ಮೈದಾನದಲ್ಲಿ ಭಾರತ-ನ್ಯೂಜಿಲೆಂಡ್ (ಎ) ನಡುವಿನ ಟೆಸ್ಟ್ ಪಂದ್ಯ: ಅಭ್ಯಾಸದಲ್ಲಿ ತೊಡಗಿದ ಆಟಗಾರರು

ಹೊಸ ದಿಗಂತ ವರದಿ,ಹುಬ್ಬಳ್ಳಿ:

ಇಲ್ಲಿಯ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ( ಕೆಎಸ್‌ಸಿಎ) ಮೈದಾನದಲ್ಲಿ ಸೆ. ೮ ರಿಂದ ೧೧ರ ವರೆಗೆ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವಿನ ೨ ನೇ ಟೆಸ್ಟ್(೪ ದಿನ) ಪಂದ್ಯ ನಡಯಲಿದ್ದು, ಮಂಗಳವಾರ ಉಭಯ ತಂಡದ ಆಟಗಾರರು ಮೈದಾನದಲ್ಲಿ ಬೆವರಿಳಿಸಿದರು.
ಸೋಮವಾರ ರಾತ್ರಿ ನಗರಕ್ಕೆ ಆಗಮಿಸಿದ ಎರಡು ತಂಡದ ಆಟಗಾರರು ಖಾಸಗಿ ಹೋಟೆಲ್‌ನಲ್ಲಿ ತಗ್ಗಿದ್ದರು. ಮಂಗಳವಾರ ಬೆಳಿಗ್ಗೆ ನ್ಯೂಜಿಲೆಂಡ್ ಎ ತಂಡದ ಆಟಗಾರರು ನೆಟ್ ನಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿದ್ದರು. ಇನ್ನೂ ಭಾರತ ಎ ತಂಡದ ಆಟಗಾರು ೧೨ ಗಂಟೆಯ ಸುಮಾರಿಗೆ ಮೈದಾನಕ್ಕೆ ಬಂದು ವ್ಯಾಯಾಮ, ನೆಟ್‌ನಲ್ಲಿ ಅಭ್ಯಾಸ ನಡೆಸಿದರು.
ಭಾರತ ಎ ತಂಡದ ನಾಯಕ ಪ್ರೀಯಾಂಕ್ ಪಾಂಚಾಲ್, ರುತರಾಜ ಗಾಯಕವಾಡ್, ರಜತ್ ಪಟೇದಾರ ನೆಟ್‌ನಲ್ಲಿ ನಿರಂತರ ಬ್ಯಾಟಿಂಗ್ ಅಭ್ಯಾಸ ನಡೆಸಿದರೆ ಇನ್ನೂ ಬೌಲರ್‌ಗಳಾದ ಉಮ್ರಾನ್ ಮಲ್ಲಿಕ್, ರಾಹುಲ್ ಚಹಾರ್ ಸಾಥ್ ನೀಡಿದರು. ನ್ಯೂಜಿಲೆಂಡ್ ಎ ತಂಡದ ನಾಯಕ್ ಟಾಮ್ ಬ್ರೂಸ್, ಬ್ಯಾಟ್ಸಮನ್‌ಗಳಾದ ಚಾಡ್ ಬೋವ್ಸ್,ಜೋಕಾ ಕಾರ್ಟರ್ ಹಾಗೂ ಬೌಲರ್‌ಗಳಾದ ಸೀನ್ ಸೋಲಿಯಾ, ಮೈಕೆಲ್ ರಿಪ್ಟನ್ ಅಭ್ಯಾಸ ನಡೆಸಿದ್ದರು. ಉಭಯ ತಂಡದ ಕೋಚ್ ಗಳು ಆಟಗಾರರಿಗೆ ಸಲಹೆ ನೀಡುತ್ತಿರುವ ದೃಶ್ಯಗಳು ಕಂಡು ಬಂದವೂ.
ಬಾರಿ ಕೂತುಹಲದ ಪಂದ್ಯ: ಈ ಸರಣಿಯಲ್ಲಿ ಮೂರು ಪಂದ್ಯಗಳಿದ್ದು, ಈಗಾಗಲೇ ಬೆಂಗಳೂರಿನ ಚಿನ್ನಸ್ವಾಮಿ ಮೈದನದಲ್ಲಿ ನಡೆದ ಪಂದ್ಯ ಡ್ರಾ ಕ್ಕೆ ಅಂತ್ಯವಾಗಿದ್ದು, ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಉಭಯ ತಂಡಗಳಿಗಿದೆ. ಆದರಿಂದ ಎರಡು ತಂಡಗಳು ಮೈದಾನದಲ್ಲಿ ಸಾಕಷ್ಟು ಸರ್ಕಸ್ ನಡೆಸಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡದ ಆಟಗಾರರಿಗೆ ಈ ಮೈದಾನ ಹೊಸದಾಗಿದ್ದು, ಹೆಚ್ಚು ಸಮಯ ಮೈದಾನದಲ್ಲಿ ಅಭ್ಯಾಸಕ್ಕೆ ಒತ್ತು ನೀಡುತ್ತಿದ್ದಾರೆ. ಭಾರತ ಎ ತಂಡದಲ್ಲಿನ ವೇಗದ ಬೌಲರ್ ಪ್ರಸಿದ್ದ ಕೃಷ್ಣ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಶಾರ್ದೂಲ್ ಠಾಕೂರ ಆಯ್ಕೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!