ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನ್ಯೂ ಇಯರ್ ಗೌಜಿ: ಎಂ.ಜಿ ರೋಡ್, ಬ್ರಿಗೇಡ್ ರೋಡ್‌ ನತ್ತ ಜನರ ಹೆಜ್ಜೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಪಾರ್ಟಿಯ ಗುಂಗು ರಂಗೇರಿದೆ. ಜಸ್ಟ್ ಕೆಲವೇ ಕ್ಷಣಗಳಲ್ಲಿ ಇಡೀ ದೇಶ 2024ಕ್ಕೆ ಗುಡ್‌ಬೈ ಹೇಳಿ, 2025 ಅನ್ನ ಭರ್ಜರಿಯಾಗಿ ವೆಲ್‌ಕಮ್ ಮಾಡಲು ಜನರು ಸಜ್ಜಾಗಿದ್ದಾರೆ.

ಬೆಂಗಳೂರಿನಲ್ಲಿ ಈಗಾಗಲೇ ನ್ಯೂ ಇಯರ್ ಪಾರ್ಟಿ ಸ್ಟಾರ್ಟ್ ಆಗಿದ್ದು, ಮಧ್ಯರಾತ್ರಿ 12 ಗಂಟೆ ಯಾವಾಗ ಆಗುತ್ತೆ ಅಂತಾ ಎಲ್ಲರ ಚಿತ್ತ ಗಡಿಯಾರದ ಮೇಲೆ ನೆಟ್ಟಿದೆ. ಸಂಜೆ ಯಾಗುತ್ತಿದ್ದಂತೆ ಜನರು ಎಂ.ಜಿ ರೋಡ್ ಬ್ರಿಗೇಡ್ ರೋಡ್‌ಗೆ ಆಗಮಿಸುತ್ತಿದ್ದಾರೆ. ಚರ್ಚ್‌ಸ್ಟ್ರೀಟ್‌ನಲ್ಲಿ ಜಮಾಯಿಸಿದ್ದಾರೆ.

ಮಾರತ್ತಹಳ್ಳಿಯ ಡಿವೈನ್​ ಪಬ್​ನಲ್ಲಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದ್ದು, ಪಬ್​ನಲ್ಲಿ ಬಾರ್ ಸೆಂಟರ್, ಡಿಜೆ & ಲೈವ್ ಬ್ಯಾಂಡ್ ವ್ಯವಸ್ಥೆ ಮಾಡಲಾಗಿದೆ. ಡಿಜೆ, ಲೈವ್ ಬ್ಯಾಂಡ್​ಗೆ ಪಾರ್ಟಿ ಪ್ರಿಯರು ಹೆಜ್ಜೆ ಹಾಕಲಿದ್ದಾರೆ. ಹೊಸ ವರ್ಷಾಚರಣೆಗೆ 2-3 ದಿನಗಳ ಹಿಂದೆಯೇ ಜನರು ಟೇಬಲ್​ ಬುಕ್​ ಮಾಡಿದ್ದಾರೆ.

ಬಣ್ಣ ಬಣ್ಣದ ಲೈಟಿಂಗ್ಸ್​, ಬಲೂನ್​ಗಳಿಂದ ಕಂಗೊಳಿಸುತ್ತಿರುವ ಪಬ್​ಗಳು, ವಿಶೇಷ ಪ್ಯಾಕೇಜ್​ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ.

ಸುಮಾರು 10ಲಕ್ಷ ಜನ ಬಂದು ಹೋಗುವ ನಿರೀಕ್ಷೆ ಇರೋದ್ರಿಂದ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ಭದ್ರತೆಗೆ 11 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 7,500 ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಪಾರ್ಟಿ ಮಾಡುವುದಕ್ಕೆ ಮಧ್ಯರಾತ್ರಿ 1ಗಂಟೆವರೆಗೂ ಅವಕಾಶವಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!