Wednesday, September 27, 2023

Latest Posts

ಕಿತ್ತಳೆ ಬಣ್ಣಕ್ಕೆ ತಿರುಗಿದ ಆಕಾಶ, ಭಯದಲ್ಲಿ ನ್ಯೂಯಾರ್ಕ್‌ ಜನತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನ್ಯೂಯಾರ್ಕ್ ನಗರ ಕಾಡ್ಗಿಚ್ಚುಗಳಿಂದ ಭಯಾನಕ ಮಾಲಿನ್ಯದೊಂದಿಗೆ ಹೋರಾಡುತ್ತಿದೆ. ಆಕಾಶವು ಕಿತ್ತಳೆ ಬಣ್ಣಕ್ಕೆ ತಿರುಗುವಷ್ಟು ಇಡೀ ನಗರವು ಹೊಗೆಯಿಂದ ತುಂಬಿತ್ತು. ನ್ಯೂಯಾರ್ಕ್ ನಿವಾಸಿಗಳು ಈ ವಿಚಿತ್ರ ದೃಶ್ಯದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಈ ಮಾಲಿನ್ಯವು ದೆಹಲಿಯಲ್ಲಿ ಮೊದಲು ಕಂಡ ಮಾಲಿನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿದೆ. ಕೆಲವರು ಈ ಪರಿಸ್ಥಿತಿಯನ್ನು ‘ಅಪೋಕ್ಯಾಲಿಪ್ಸ್ ಹೆಲ್‌ಸ್ಕೇಪ್’ ಎಂದೂ ಕರೆದಿದ್ದಾರೆ. ರಸ್ತೆಗಳೇ ಕಾಣದಷ್ಟು ಹೊಗೆ ಆವರಿಸಿತ್ತು.

ನ್ಯೂಜೆರ್ಸಿಯ ನೆವಾರ್ಕ್ ಲಿಬರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನ್ಯೂಯಾರ್ಕ್ ನಗರದ ಲಾಗಾರ್ಡಿಯಾ ವಿಮಾನ ನಿಲ್ದಾಣಗಳು ವಾಯು ಮಾಲಿನ್ಯದಿಂದ ಪ್ರಭಾವಿತವಾಗಿವೆ. ದಟ್ಟ ಹೊಗೆಯ ಜೊತೆಗೆ ಒಂದು ರೀತಿಯ ವಾಸನೆ.. ಕತ್ತಲೆಯಾದ ಆಕಾಶದೊಂದಿಗೆ ಜನ ಉಸಿರಾಡುವುದೇ ಕಷ್ಟವಾಯಿತು. ಈ ಪರಿಸ್ಥಿತಿಯು ಮೇರಿಲ್ಯಾಂಡ್‌ನಿಂದ ನ್ಯೂ ಹ್ಯಾಂಪ್‌ಶೈರ್‌ವರೆಗಿನ ನಗರಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡುಬಂದಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!