ಮಹಿಳಾ ಏಕದಿನ ವಿಶ್ವಕಪ್: ಬಾಂಗ್ಲಾ ವಿರುದ್ಧ ನ್ಯೂಜಿಲ್ಯಾಂಡ್ ಗೆ 9 ವಿಕೆಟ್​ಗಳ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಏಕದಿನ ವಿಶ್ವಕಪ್​ನ 5ನೇ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ ಆತಿಥೇಯ ನ್ಯೂಜಿಲ್ಯಾಂಡ್ 9 ವಿಕೆಟ್​ಗಳ ಜಯ ಸಾಧಿಸಿದೆ.
ಟಾಸ್​ ಗೆದ್ದ ಕಿವೀಸ್ ತಂಡ ಬಾಂಗ್ಲಾದೇಶಕ್ಕೆ ಬ್ಯಾಟಿಂಗ್ ಆಹ್ವಾನಿಸಿತ್ತು. ಮಳೆಯಿಂದ 27 ಓವರ್​ಗಳಿಗೆ ಮೀಸಲಾಗಿದ್ದ ಪಂದ್ಯದಲ್ಲಿ ಬಾಂಗ್ಲಾ ಕೇವಲ 140 ರನ್​ಗಳಿಸಿತು.
141 ರನ್​ಗಳ ಸುಲಭ ಗುರಿಯನ್ನು ಆತಿಥೇಯ ತಂಡ ಕೇವಲ 20 ಓವರ್​ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ತಲುಪಿತು.
ಕಿವೀಸ್ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3 ರನ್​ಗಳ ರೋಚಕ ಸೋಲು ಕಂಡಿತ್ತು. ಬಾಂಗ್ಲಾದೇಶ ಸತತ 2 ಪಂದ್ಯಗಳಲ್ಲಿ ಸೋಲು ಕಂಡಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!