ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್’ನ ದಿಗ್ಗಜ ಬ್ಯಾಟ್ಸ್ ಮ್ಯಾನ್ ಮಾರ್ಟಿನ್ ಗಪ್ಟಿಲ್ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ನ್ಯೂಜಿಲೆಂಡ್ ಪರ 198 ಏಕದಿನ, 122 ಟಿ 20 ಮತ್ತು 47 ಟೆಸ್ಟ್ ಪಂದ್ಯಗಳನ್ನ ಆಡಿದ ಅವರು ಎಲ್ಲಾ ಸ್ವರೂಪಗಳಲ್ಲಿ 23 ಶತಕಗಳನ್ನು ಗಳಿಸಿದ್ದಾರೆ .
ಆಕ್ಲೆಂಡ್ ಏಸಸ್ ತಂಡದ ಪ್ರಸ್ತುತ ನಾಯಕರಾಗಿರುವ ಗಪ್ಟಿಲ್ ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಟಿ20 ಫ್ರ್ಯಾಂಚೈಸ್ ಕ್ರಿಕೆಟ್’ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.
2022 ರಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ಪರ ಆಡಿದ ಗಪ್ಟಿಲ್, 122 ಟಿ20ಐ ಪಂದ್ಯಗಳಿಂದ 3,531 ರನ್ ಗಳಿಸುವ ಮೂಲಕ ದೇಶದ ಪ್ರಮುಖ ಟಿ 20 ಐ ರನ್ ಸ್ಕೋರರ್ ಆಗಿ ತಮ್ಮ 14 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನವನ್ನ ಕೊನೆಗೊಳಿಸಿದರು.