ವಿಶ್ವಕಪ್‌ ಸೆಮೀಸ್:‌ ಪಾಕಿಸ್ತಾನ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್‌ ಗೆದ್ದಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಪಂದ್ಯದಲ್ಲಿ ಗೆದ್ದ ತಂಡವು ನಾಳೆ ಇಂಡಿಯಾ- ಇಂಗ್ಲೆಂಡ್‌ ನಡುವೆ ನಡೆಯುವ ಪಂದ್ಯದಲ್ಲಿ ವಿಜೇತರನ್ನು ಫೈನಲ್‌ ನಲಲಿ ಎದುರಿಸಲಿದೆ. ನ್ಯೂಜಿಲೆಂಡ್ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಸದೃಢವಾಗಿದೆ. ಪಾಕ್‌ ಬೌಲಿಂಗ್‌ ವಿಭಾಗವು ಟೂರ್ನಿಯ ಬಲಿಷ್ಠ ಬೌಲಿಂಗ್‌ ವಿಭಾಗಗಳಲ್ಲೊಂದು. ಟಿ20 ಕ್ರಿಕೆಟ್​ನಲ್ಲಿ ಎರಡೂ ತಂಡಗಳ ಒಟ್ಟಾರೆ ದಾಖಲೆಯನ್ನು ನಾವು ನೋಡಿದರೆ, ಇದುವರೆಗೆ ಆಡಿರುವ 28 ಪಂದ್ಯಗಳಲ್ಲಿ, ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ ಮೇಲುಗೈ ಸಾಧಿಸಿದ್ದು, 17 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಇನ್ನುಳಿದ11 ಪಂದ್ಯಗಳಲ್ಲಿ ಸೋಲುಂಡಿದೆ. ಎರಡೂ ತಂಡಗಳ ನಡುವೆ ರೋಚಕ ಹಣಾಹಣಿಯನ್ನು ನಿರೀಕ್ಷಿಸಲಾಗಿದೆ.

ಪಾಕಿಸ್ತಾನ (ಪ್ಲೇಯಿಂಗ್ XI):
ಮೊಹಮ್ಮದ್ ರಿಜ್ವಾನ್ (ಡಬ್ಲ್ಯೂ), ಬಾಬರ್ ಅಜಮ್ (ಸಿ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ

ನ್ಯೂಜಿಲೆಂಡ್ (ಪ್ಲೇಯಿಂಗ್ XI):
ಫಿನ್ ಅಲೆನ್, ಡೆವೊನ್ ಕಾನ್ವೇ(w), ಕೇನ್ ವಿಲಿಯಮ್ಸನ್(c), ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!