Tuesday, October 3, 2023

Latest Posts

ನ್ಯೂಜಿಲೆಂಡ್‌ ನಲ್ಲಿ ಕೋವಿಡ್‌ ಟಫ್‌ ರೂಲ್ಸ್:‌ ತಮ್ಮ ಮದುವೆಯನ್ನೇ ರದ್ದುಗೊಳಿಸಿದ ಪ್ರಧಾನಿ ಜೆಸಿಂದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನ್ಯೂಜಿಲೆಂಡ್‌ ನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಪ್ರಧಾನಿ ಜೆಸಿಂದಾ ಆರ್ಡೆನ್‌ ಅವರು ತಮ್ಮ ಮದುವೆಯನ್ನೇ ರದ್ದುಗೊಳಿಸಿದ್ದಾರೆ.
ನ್ಯೂಜಿಲೆಂಡ್‍ನ ಪ್ರಧಾನಿ ಜೆಸಿಂದಾ ಆರ್ಡೆನ್ ಅವರು ದೀರ್ಘಕಾಲದ ಜೊತೆಗಾರ ಕ್ಲಾರ್ಕ್ ಗೆಫಾರ್ಡ್ ಜೊತೆ ಆರ್ಡೆನ್ ಜೊತೆಗೆ ಮುಂದಿನ ವಾರ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದರು. ಆದರೆ ಕೋವಿಡ್‌ ಕಾರಣ ದೇಶದಲ್ಲಿನ ಲಾಕ್‌ ಡೌನ್‌ ನಿಯಮಗಳನ್ನು ಅನುಸರಿಸಿ ಜೆಸಿಂದಾ ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾರೆ.
ನ್ಯೂಜಿಲೆಂಡ್‌ ನಲ್ಲಿ ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ವಿವಾಹಗಳಿಗೆ ಲಸಿಕೆ ಪಡೆದ 100 ಮಂದಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ನಾನು ಮುಂದಿನ ವಾರದಲ್ಲಿ ಮದುವೆಯಾಗುತ್ತಿಲ್ಲ. ಸೋಂಕಿನಿಂದ ಸಂಕಷ್ಟಕ್ಕೆ ಒಳಗಾಗಿರುವವರಲ್ಲಿ ನಾನೂ ಒಬ್ಬಳು. ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕೋವಿಡ್‌ ನಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಪ್ರೀತಿ ಪಾತ್ರರ ಜತೆ ಇರಲು ಸಾಧ್ಯವಾಗದ ಸ್ಥಿತಿ ನೋಡಿ ಬೇಸರವಾಗಿದೆ ಎಂದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!