ಭಾರತ- ಪಾಕಿಸ್ತಾನ ಪ್ರವಾಸಕ್ಕೆ ಬಲಿಷ್ಠ ಏಕದಿನ ತಂಡ ಪ್ರಕಟಿಸಿದ ನ್ಯೂಜಿಲೆಂಡ್

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಜನವರಿಯಲ್ಲಿ ಆರಂಭವಾಗಲಿರುವ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲೆಂಡ್ ಮಂಡಳಿ ಬಲಿಷ್ಠ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ.
ಈ ಉಭಯ ದೇಶಗಳ ಪ್ರವಾಸಕ್ಕೆ 17 ಸದಸ್ಯರ ತಂಡವನ್ನು ಪ್ರಕಟಿಸಿರುವ ಮಂಡಳಿ ಎರಡೂ ಪ್ರವಾಸಗಳಿಗೂ ಇಬ್ಬರೂ ಬೇರೆ ಬೇರೆ ಆಟಗಾರರಿಗೆ ನಾಯಕತ್ವ ಪಟ್ಟಕಟ್ಟಿದೆ. ಜೊತೆಗೆ ಎರಡು ಸರಣಿಗೆ ಇಬ್ಬರು ಪ್ರತ್ಯೇಕ ಕೋಚ್‌ ನೇಮಕ ಮಾಡಲಾಗಿದೆ.
ಭಾರತದಲ್ಲಿ ನಡೆಯಲಿರುವ ಮೂರು ಪಂದ್ಯಗಳ ODI (ಜನವರಿ 18, 21, 24) ಮತ್ತು ಟಿ 20 (ಜನವರಿ 27, 29, ಫೆಬ್ರವರಿ 1) ಸರಣಿಗಳಿಗೆ ಲ್ಯೂಕ್ ರೊಂಚಿ ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಾಬ್ ಕಾರ್ಟರ್ ಮತ್ತು ಪಾಲ್ ವೈಸ್‌ಮನ್ ಅವರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕೇನ್ ವಿಲಿಯಮ್ಸನ್ ಪಾಕಿಸ್ತಾನ ಏಕದಿನ ಪಂದ್ಯಗಳಿಗೆ ಮಾತ್ರ ನಾಯಕರಾಗಿ ತಂಡದಲ್ಲಿರಲಿದ್ದಾರೆ. ಭಾರತದ ಪ್ರವಾಸದಿಂದ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಬಾರತ ವಿರುದ್ಧದ ಏಕದಿನ ಸರಣಿಗೆ ಟಾಮ್ ಲ್ಯಾಥಮ್ ನಾಯಕತ್ವ ವಹಿಸಲಿದ್ದಾರೆ, ಬ್ಯಾಟ್ಸ್‌ ಮನ್ ಮಾರ್ಕ್ ಚಾಪ್ಮನ್ ಮತ್ತು ವೇಗದ ಬೌಲರ್ ಜಾಕೋಬ್ ಡಫ್ಫಿ ಅವರು ವಿಲಿಯಮ್ಸನ್ ಮತ್ತು ಸೌಥಿ ಅವರ ಜಾಗದಲ್ಲಿ ಸ್ಥಾನ ಪಡೆದಿದ್ದಾರೆ. ಬ್ಯಾಟ್ಸ್‌ಮನ್ ಹೆನ್ರಿ ನಿಕೋಲ್ಸ್ ಮತ್ತು ಲೆಗ್-ಸ್ಪಿನ್ನರ್ ಇಶ್ ಸೋಧಿ  ಅವರನ್ನು ಎರಡೂ ಸರಣಿಗಳಿಗೆ ಆಯ್ಕೆ ಮಾಡಲಾಗಿದೆ.

ನ್ಯೂಜಿಲೆಂಡ್‌ ಏಕದಿನ ತಂಡ:
ಕೇನ್ ವಿಲಿಯಮ್ಸನ್ (ನಾಯಕ – ಪಾಕಿಸ್ತಾನ ಪ್ರವಾಸ), ಟಾಮ್ ಲ್ಯಾಥಮ್ (ಕ್ಯಾಪ್ಟನ್ – ಭಾರತ ಪ್ರವಾಸ), ಟಿಮ್ ಸೌಥಿ (ಪಾಕಿಸ್ತಾನ ಪ್ರವಾಸ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಜಿ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಮಾರ್ಕ್ ಚಾಪ್ಮನ್ (ಭಾರತ ಪ್ರವಾಸ) ಮತ್ತು ಜಾಕೋಬ್ ಡಫ್ಫಿ (ಭಾರತ ಪ್ರವಾಸ)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!