ಹೊಸದಿಗಂತ ವರದಿ,ಕೊಪ್ಪಳ:
ಬೆಂಕಿ ನಗರದಲ್ಲಿ ಶನಿವಾರ ನವಜಾತ ಗಂಡು ಶಿಶು ಚರಂಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ಶಿಶು ದೇಹ ವಶಕ್ಕೆ ಪಡೆದು ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಘಟನೆ ಸಂಬಂಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇರುವೆ ಮೆತ್ತಿಕೊಂಡ ಸ್ಥಿತಿಯಲ್ಲಿ ಮಗು ಕಂಡ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಕ್ರಮ ಸಂಬಂಧದಿಂದ ಜನಿಸಿದ ಶಿಶು ಎಂಬ ಅನುಮಾನ ಮೂಡಿದೆ. ಚರಂಡಿಗೆ ಬಿಸಾಕಿದವರು ಯಾರೆಂಬ ಬಗ್ಗೆ ಗೊತ್ತಾಗಿಲ್ಲ.