ಮದುವೆಯ ಮೊದಲ ರಾತ್ರಿಯಲ್ಲೇ ಬದುಕು ಅಂತ್ಯ: ಹೃದಯಾಘಾತದಿಂದ ನವ ದಂಪತಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮದುವೆಯಾದ ರಾತ್ರಿಯೇ ನವದಂಪತಿಗಳು ಹೃದಯಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ.

ಪ್ರತಾಪ್ ಯಾದವ್(22), ಪುಷ್ಪಾ (20) ಮೃತ ದಂಪತಿ.

ಮೇ. 30 ರಂದು ಇಬ್ಬರ ಮದುವೆ ನಡೆದಿತ್ತು, ಮದುವೆಯಾದ ರಾತ್ರಿ ನವಜೋಡಿ ತಮ್ಮ ಕೋಣೆಗೆ ಹೋಗಿದ್ದಾರೆ. ಮರುದಿನ ಬೆಳಗ್ಗೆ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪೊಲೀಸರು ಬಂದು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದು,ಪೋಸ್ಟ್‌ ಮಾರ್ಟಂ ವರದಿಯಲ್ಲಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ನವದಂಪತಿಗಳಾದ ಪ್ರತಾಪ್ ಮತ್ತು ಪುಷ್ಪಾ ಅವರ ಅಂತ್ಯಕ್ರಿಯೆಯನ್ನು ಪ್ರತಾಪ್ ಅವರ ಗ್ರಾಮದಲ್ಲಿ ಅಪಾರ ಜನಸ್ತೋಮದ ನಡುವೆ ಒಂದೇ ಚಿತಾಗಾರದಲ್ಲಿ ನೆರವೇರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!