ಮುಂದಿನ ವರ್ಷದಿಂದ ಸರ್ಕಾರಿ, ಖಾಸಗಿ ಸೀಟ್ ಗಾಗಿ ‘ಸಿಇಟಿ’ ಮಾತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈವರೆಗೂ ಸರ್ಕಾರಿ ಸೀಟ್‌ಗಳಿಗೆ ಮಾತ್ರ ಸಿಇಟಿ ನಡೆಯುತ್ತಿತ್ತು. ಖಾಸಗಿ ಸೀಟ್‌ಗಳಿಗೆ ಕಾಮೆಡ್‌-ಕೆ ಪರೀಕ್ಷೆ ನಡೆಸಲಾಗ್ತಿತ್ತು. ಇದೀಗ ಎರಡನ್ನೂ ಒಟ್ಟಿಗೆ ನಡೆಸಲು ಸಮ್ಮತಿ ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವರು, ಈವರೆಗೂ ಸರ್ಕಾರಿ ಸೀಟ್‌ಗಳಿಗೆ ಮಾತ್ರ ಸಿಇಟಿ ನಡೆಯುತ್ತಿತ್ತು. ಖಾಸಗಿ ಸೀಟ್‌ಗಳಿಗೆ ಕಾಮೆಡ್‌-ಕೆ ಪರೀಕ್ಷೆ ನಡೆಸಲಾಗಿತ್ತು. ಇದೀಗ ಎರಡನ್ನೂ ಒಟ್ಟಿಗೆ ನಡೆಸಲು ಸಮ್ಮತಿ ನೀಡಿದ್ದಾರೆ. ಹಾಗಾಗಿ ಹೇಗೆ ಪರೀಕ್ಷೆ ನಡೆಸಬೇಕೆಂದು ಚರ್ಚೆ ಮಾಡಿದ್ದೇವೆ ಎಂದರು.
ಇನ್ನು ಈ ವರ್ಷ ಮಾತ್ರ ಸಿಇಟಿ, ಕಾಮೆಡ್‌-ಕೆ ಇರಲಿದ್ದು, ಮುಂದಿನ ವರ್ಷದಿಂದ ಸಿಇಟಿ ಮಾತ್ರ ಇರಲಿದೆ. ಇನ್ನುಈ ಬಗ್ಗೆ ಒಡಂಬಡಿಕೆ ಆಗಲಿದೆ ಎಂದ ಅಶ್ವತ್ಥ್‌ ನಾರಾಯಣ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!