ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಸೇರಿಕೊಂಡು ಮೈತಿಕೂಟ ರಚಿಸಿಕೊಂಡಿವೆ. ಈ ಮೈತ್ರಿಕೂಟಕ್ಕೆ ʼಇಂಡಿಯಾʼ ಎಂದು ಹೆಸರಿಸಲಾಗಿದ್ದು, ಪಕ್ಷಗಳು ತಮ್ಮ ಮೂರನೇ ಸಭೆಯನ್ನು ನಡೆಸಲು ಮುಂದಾಗಿವೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಮುಂಬೈನಲ್ಲಿ ಈ ಸಭೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಇಂಡಿಯಾ ಮೈತ್ರಿಕೂಟದ ಮೊದಲ ಸಭೆಯು ಜೂನ್ ತಿಂಗಳಲ್ಲಿ ಪಾಟ್ನಾದಲ್ಲಿ ಮತ್ತು ಎರಡನೇ ಸಭೆಯು ಕರ್ನಾಟಕದಲ್ಲಿ ನಡೆದಿತ್ತು. ಈ ಬಾರಿಯ ಸಭೆಯಲ್ಲಿ ಚುನಾವಣಾ ಪೂರ್ವದ ಸಿದ್ಧತೆಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ.