ವ್ಯಕ್ತಿಯ ಮೃತದೇಹದ ಪಕ್ಕ ಇದ್ದಿದ್ದು ಬರೋಬ್ಬರಿ 124 ಹಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಮೇರಿಲ್ಯಾಂಡ್‌ನ ಮನೆಯೊಂದರಲ್ಲಿ ವ್ಯಕ್ತಿಯ ಮೃತದೇಹದ ಬಳಿ 124 ಹಾವುಗಳು ಪತ್ತೆಯಾಗಿವೆ.
ಇದೊಂದು ಅಚ್ಚರಿಯ ಘಟನೆಯಾಗಿದ್ದು, ಇದರಲ್ಲಿ ಎಲ್ಲ ರೀತಿಯ ಹಾವುಗಳೂ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯೊಂದರಿಂದ ಕೊಳೆತ ವಾಸನೆ ಬರುತ್ತಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮನೆಗೆ ಬಂದು ನೋಡಿದ ವೇಳೆ ಇಲ್ಲಿ ಮೃತದೇಹದ ಪಕ್ಕ 124  ಹಾವುಗಳು ಕಂಡುಬಂದಿದೆ. ವಿಷಕಾರಿ, ವಿಷಕಾರಿ ಅಲ್ಲದ, ಹೆಬ್ಬಾವು, ವೈಪರ್ ಸ್ನೇಕ್ ಮುಂತಾದ ನಾನಾ ಪ್ರಬೇಧದ ಹಾವುಗಳು ಇದ್ದವು ಎನ್ನಲಾಗಿದೆ. ಮೃತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಕಾರಣ ತಿಳಿದುಬಂದಿಲ್ಲ. ಇಷ್ಟೊಂದು ಹಾವುಗಳು ಒಂದೇ ಜಾಗಕ್ಕೆ ಬಂದಿದ್ದು ಹೇಗೆ ಎನ್ನುವ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇನ್ನು ಹಾವುಗಳನ್ನು ಹಿಡಿದಿರುವ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಕಾಡಿಗೆ ಬಿಡಲು ತಯಾರಿ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!