ಅಫ್ಘಾನ್‌ ಪರಿಸ್ಥಿತಿ ಚರ್ಚಿಸಲು ನಾರ್ವೇʼಗೆ ಭೇಟಿ ನೀಡಿದ ತಾಲಿಬಾನ್‌ ನಿಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳು ಹಾಗೂ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ತಾಲಿಬಾನ್‌ ಪ್ರತಿನಿಧಿಗಳು ನಾರ್ವೇ ಗೆ ಭೇಟಿ ನೀಡಿದ್ದಾರೆ.
ಭಾನುವಾರ ತಾಲಿಬಾನ್‌ ಪ್ರತಿನಿಧಿಗಳು ನಾರ್ವೆ ರಾಜಧಾನಿ ಒಸ್ಲೋ ತಲುಪಿದ್ದು, ಮೂರು ದಿನಗಳ ಭೇಟಿಯಲ್ಲಿದ್ದಾರೆ. ಈ ವೇಳೆ ಅಫ್ಘಾನ್‌ ಪರಿಸ್ಥಿತಿಗೆ ನಾರ್ವೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಅಫ್ಘಾನ್‌ ನಲ್ಲಿ ಲಕ್ಷಾಂತರ ಮಂದಿ ಆಹಾರ ಸಮಸ್ಯೆ ಎದುರಿಸುತ್ತಿದ್ದು, ಮಾನವ ಹಕ್ಕುಗಳು ಇಲ್ಲದಂತಾಗಿದೆ. ಈ ಬಗ್ಗೆ ಅಲ್ಲಿನ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.
ಹೆಣ್ಣು ಮಕ್ಕಳ ಶಿಕ್ಷಣ, ಸಮುದಾಯ ಕಾರ್ಯಕ್ರಮಗಳಲ್ಲಿ ಅವರ ಭಾಗವಹಿಸುವಿಕೆ ಅಗತ್ಯ ಎಂದು ನಾರ್ವೆ ತಿಳಿಸಿದೆ. ತಾಲಿಬಾನ್​ ವಿದೇಶಾಂಗ ಸಚಿವ ಅಮಿರ್​​ ಖಾನ್​​ ಮುತ್ತಕಿ ಅಫ್ಘಾನ್​ ನಿಯೋಗದ ನೇತೃತ್ವ ವಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!