ಅಯೋಧ್ಯೆಯಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ NHAI ಮಾಸ್ಟರ್ ಪ್ಲಾನ್: 68 ಕಿಮೀ ಗ್ರೀನ್ ಫೀಲ್ಡ್ ಬೈಪಾಸ್ ನಿರ್ಮಾಣಕ್ಕೆ ಚಿಂತನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನದಟ್ಟಣೆ ಕಡಿಮೆ ಮಾಡುವ ಪ್ರಯತ್ನದಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 3,570 ಕೋಟಿ ರೂ.ಗಳ ಹೂಡಿಕೆಯೊಂದಿಗೆ 68 ಕಿ.ಮೀ ಗ್ರೀನ್ ಫೀಲ್ಡ್ ಬೈಪಾಸ್ ನಿರ್ಮಿಸಲು ಕೇಂದ್ರದಿಂದ ವಿಶೇಷ ಅನುಮೋದನೆ ಕೋರಿದೆ.

ಲಕ್ನೋ, ಬಸ್ತಿ ಮತ್ತು ಗೊಂಡಾ ಜಿಲ್ಲೆಗಳನ್ನು ಒಳಗೊಂಡಿರುವ ಈ 4/6 ಪಥದ ಹೆದ್ದಾರಿಗೆ ಎನ್‌ಎಚ್‌ಎಐ ಬಿಡ್ ಗಳನ್ನು ಆಹ್ವಾನಿಸಿದೆ.

ರಾಮ ಮಂದಿರ ಉದ್ಘಾಟನೆಯ ನಂತರ ಈ ಪ್ರದೇಶದಲ್ಲಿ ಪ್ರಯಾಣಿಕರ ಮತ್ತು ಸರಕು ವಾಹನಗಳ ಸಂಚಾರದ ಹೆಚ್ಚಳವನ್ನು ಪರಿಗಣಿಸಿ ಉತ್ತರ ಅಯೋಧ್ಯೆ ಮತ್ತು ದಕ್ಷಿಣ ಅಯೋಧ್ಯೆ ಬೈಪಾಸ್ ಎಂಬ ಎರಡು ಭಾಗಗಳಲ್ಲಿ ಈ ಯೋಜನೆ ರೂಪಿಸಲಾಗಿದೆ.

ಅಂದಾಜಿನ ಪ್ರಕಾರ, ಸಂಚಾರವು ಪ್ರಸ್ತುತ ದಿನಕ್ಕೆ 89,023 ರಿಂದ 2033 ರ ವೇಳೆಗೆ ಪ್ರತಿದಿನ 2.17 ಲಕ್ಷಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ಬೈಪಾಸ್ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನಿರ್ಮಿಸಲಾಗುವುದು.

ಸದ್ಯಕ್ಕೆ ಭಾರತ್ ಮಾಲಾ ಅಡಿಯಲ್ಲಿ ಯಾವುದೇ ಹೊಸ ಯೋಜನೆ ಮುಂದುವರಿಸದಂತೆ ಹಣಕಾಸು ಸಚಿವಾಲಯವು ರಸ್ತೆ ಸಚಿವಾಲಯವನ್ನು ಕೇಳಿರುವುದರಿಂದ ವಿಶೇಷ ಅನುಮೋದನೆ ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆಗೆ 1,000 ಕೋಟಿ ರೂ.ಗಿಂತ ಹೆಚ್ಚು ವೆಚ್ಚವಾಗುವುದರಿಂದ, ಪಿಪಿಪಿ ಯೋಜನೆಗಳನ್ನು ಮೌಲ್ಯಮಾಪನ ಮಾಡುವ ಉನ್ನತ ಸಮಿತಿಯಿಂದ ಸಚಿವಾಲಯವು ಅನುಮೋದನೆ ಪಡೆಯಬೇಕಾಗಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!