ಲಂಡನ್​ನಲ್ಲಿನ ಭಾರತದ ಹೈಕಮಿಷನ್​ ಮೇಲೆ ದಾಳಿ ಮಾಡಿದ್ದ ಆರೋಪಿಯನ್ನು ಬಂಧಿಸಿದ NIA

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಕಳೆದ ವರ್ಷ ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ನ ಮೇಲೆ ನಡೆದ ದಾಳಿಯ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.

ಈ ಕುರಿತು ಎನ್‌ಐಎ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಮೇಲಿನ ಹಿಂಸಾತ್ಮಕ ದಾಳಿ ಮತ್ತು ನಂತರದ ಪ್ರತಿಭಟನೆಯ ಸಮಯದಲ್ಲಿ ಕಾನೂನುಬಾಹಿರ ಕ್ರಮಗಳಿಗೆ ಸಂಬಂಧಿಸಿದ 2023ರ ಪ್ರಕರಣದ ಪ್ರಮುಖ ಆರೋಪಿಯನ್ನು ಗುರುವಾರ ಬಂಧಿಸಿದೆ ಎಂದು ಎನ್‌ಐಎ ತಿಳಿಸಿದೆ.

2023ರ ಮಾರ್ಚ 22ರಂದು ನಡೆದ ಪ್ರತಿಭಟನೆಯ ಸಂದರ್ಭ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಕ್ಕಾಗಿ ಯುಕೆಯ ಹೌನ್ಸ್ಲೋ ನಿವಾಸಿ ಇಂದರ್ಪಾಲ್ ಸಿಂಗ್ ಗಾಬಾನನ್ನು ಬಂಧಿಸಲಾಗಿದೆ.

ಕಳೆದ ವರ್ಷ ಮಾರ್ಚ್ 19 ಮತ್ತು ಮಾರ್ಚ್ 22ರಂದು ಲಂಡನ್‌ನಲ್ಲಿ ನಡೆದ ಘಟನೆಗಳು ಭಾರತೀಯ ಮಿಷನ್‌ಗಳು ಮತ್ತು ಅದರ ಅಧಿಕಾರಿಗಳ ಮೇಲೆ ದಾಳಿ ಮಾಡುವ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಈ ಪ್ರಕರಣದಲ್ಲಿ ಎನ್‌ಐಎ ನಡೆಸಿದ ತನಿಖೆಯಿಂದ ತಿಳಿದುಬಂದಿದೆ.

ಕಳೆದ ಮಾರ್ಚ್ 18 ರಂದು ಖಲಿಸ್ತಾನಿ ಪರ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಕ್ರಮ ತೆಗೆದುಕೊಂಡಿದ್ದಕ್ಕೆ ಪ್ರತೀಕಾರವಾಗಿ ಇಂದರ್‌ಪಾಲ್ ಸಿಂಗ್ ಗಾಬಾ ಹೈಕಮಿಷನ್ ಮೇಲೆ ದಾಳಿ ಮಾಡಿದ್ದನು. ಕಳೆದ ವರ್ಷ ಮಾರ್ಚ್ 19 ಮತ್ತು 22 ರಂದು ಲಂಡನ್‌ನಲ್ಲಿ ನಡೆದ ಘಟನೆಗಳು ದಾಳಿಯ ಭಾಗವಾಗಿವೆ ಎಂದು ಎನ್​ಐಎ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!