ಕಲಬುರಗಿಯಲ್ಲಿ ಎನ್ಐಎ ದಾಳಿ: ಪಿಎಫ್ಐ ಸಂಘಟನೆ ಅಧ್ಯಕ್ಷ ಎಜಾಜ್ ಅಲಿ ವಶಕ್ಕೆ

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ನಗರದ ಟಿಪ್ಪು ಸುಲ್ತಾನ ನಗರದಲ್ಲಿ ಪಿ.ಎಫ್.ಐ.ಅಧ್ಯಕ್ಷನ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಎನ್.ಐ.ಎ.ದಾಳಿ ಮಾಡಿದೆ.

ಪಿ.ಎಫ್.ಐ ಅಧ್ಯಕ್ಷ ಮತ್ತು ಖಜಾಂಚಿ ಮನೆ, ಕಚೇರಿ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು,ನಸುಕಿನ ಜಾವವೇ ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಪಿ.ಎಫ್.ಐ.ಅಧ್ಯಕ್ಷ ಎಜಾಜ್ ಹುಸೇನ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ಮಧ್ಯೆ ಎನ್.ಐ.ಎ.ಹಾಗೂ ಬಿಜೆಪಿ ಸಕಾ೯ರ ವಿರುದ್ಧ ಪಿಎಫ್ ಐ ಕಾಯ೯ಕತ೯ರು ಪ್ರತಿಭಟನೆ ನಡೆಸಿದ್ದಾರೆ.

ಎಜಾಜ್ ಅಲಿ,ಯನ್ನು ವಶಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಕಾಯ೯ಕತ೯ರು ಪ್ರತಿಭಟನೆ ಮಾಡಿದ್ದಾರೆ.ಈ ಮಧ್ಯೆಯೂ ಎಜಾಜ್ ಅಲಿಯನ್ನು ಪೋಲಿಸರು ಬಂಧನ ಮಾಡಿ,ವಶಕ್ಕೆ ತೆಗಗದುಕೊಂಡು ಹೋಗಿದ್ದಾರೆ.

ಪೋಲಿಸರು ಕರೆದೊಯ್ಯುವ ಸಂದರ್ಭದಲ್ಲಿ ಎಜಾಜ್ ಅಲಿ ಅವರ ಕಾಯ೯ಕತ೯ರಿಗೆ ಕೈ ಬಿಸಿ ತೆರಳಿದ್ದಾನೆ.

ಪಿಎಫ್ಐ ಸಂಘಟನೆಯ ರಾಜ್ಯ ಸದಸ್ಯ ಶಾಹೀದ್ ನಾಸಿರ್ ಮನೆ ಮೇಲೂ ಇದೇ ವೇಳೆ ದಾಳಿ ಮಾಡಲಾಗಿದೆ. ಎನ್.ಐ.ಎ.ದಾಳಿ ವೇಳೆ ಪಿಎಫ್ ಐ ಸಂಘಟನೆ ಖಜಾಂಚಿ ಹಾಗೂ ರಾಜ್ಯ ಸದಸ್ಯ ನಾಪತ್ತೆ ಯಾಗಿದ್ದಾರೆ.ಹೀಗಾಗಿ ಶಾಹೀದ್ ನಾಸಿರ್ ಮನೆಯ ಶೋಧ ಕಾರ್ಯ ಅಧಿಕಾರಿಗಳು ನಡೆಸುತ್ತಿದ್ದಾರೆ.

ಹಲವು ಮಹತ್ವದ ದಾಖಲೆಗಳನ್ನು ಎನ್.ಐ.ಎ.ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಪಿಎಫ್ ಐ ಅಧ್ಯಕ್ಷ ಎಜಾಜ್ ಅಲಿ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಎಜಾಜ್ ಮನೆಯಲ್ಲಿ 14 ಲಕ್ಷ ನಗದು ಹಣ ಪತ್ತೆಯಾಗಿದೆ.

ಪಿಎಫ ಐ ಸಂಘಟನೆಗೆ ಸಂಬಂಧಿಸಿದಂತೆ ಹಲವು ದಾಖಲಾತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಎಜಾಜ್ ಅಲಿ ಸಂಬಂಧ ಪಟ್ಟ ಹಲವು ಆಸ್ತಿ ಪತ್ರಗಳು ಪತ್ತೆಯಾಗಿದ್ದು,ಪಿಎಫ್ ಐ ಸಂಘಟನೆಗೆ ಸಂಬಂಧಿಸಿದಂತೆ ಮುಂದಿನ ಹೋರಾಟದ ಕಾಯ೯ಕ್ರಮಗಳ ಬಗ್ಗೆ ರೂಪಿಸಿರುವ ದಾಖಲಾತಿ ಪತ್ತೆಯಾಗಿದ್ದು,ಶೋಧ ಕಾರ್ಯ ಮುಂದುವರಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!