ಭಾರತಕ್ಕೆ ನಕಲಿ ನೋಟು ಪೂರೈಕೆ ಮಾಡುತ್ತಿದ್ದ ಐಎಸ್‌ಐ ಏಜೆಂಟ್‌ ನೇಪಾಳದಲ್ಲಿ ಗುಂಡೇಟಿಗೆ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ನೇಪಾಳದ ಕಠ್ಮಂಡುವಿನಲ್ಲಿ ಅವನ ಅಡಗುತಾಣದ ಹೊರಗೆ ಸೆಪ್ಟೆಂಬರ್ 19 ರಂದು ಗುಂಡಿಕ್ಕಿ ಕೊಲ್ಲಲಾಗಿದೆ. ಈತ ಭಾರತದಲ್ಲಿ ISI ನ ನಕಲಿ ನೋಟುಗಳ ಅತಿದೊಡ್ಡ ಪೂರೈಕೆದಾರನಾಗಿದ್ದ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ ವರದಿ ಮಾಡಿದೆ.

ಐಎಸ್‌ಐ ಏಜೆಂಟ್ ನನ್ನು ಲಾಲ್ ಮೊಹಮ್ಮದ್ ಅಲಿಯಾಸ್ ಮೊಹಮ್ಮದ್ ದರ್ಜಿ (55) ಎಂದು ಗುರುತಿಸಲಾಗಿದೆ.

ಐಎಸ್‌ಐ ಸೂಚನೆ ಮೇರೆಗೆ ಲಾಲ್ ಮೊಹಮ್ಮದ್ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತದ ನಕಲಿ ಕರೆನ್ಸಿಯನ್ನು ನೇಪಾಳದಲ್ಲಿ ಪಡೆದು ಅಲ್ಲಿಂದ ಭಾರತಕ್ಕೆ ಸರಬರಾಜು ಮಾಡುತ್ತಿದ್ದ.

ಅಧಿಕಾರಿಗಳ ಪ್ರಕಾರ, ಲಾಲ್ ಮೊಹಮ್ಮದ್ ಐಎಸ್‌ಐಗೆ ಲಾಜಿಸ್ಟಿಕ್ಸ್ ಬೆಂಬಲದೊಂದಿಗೆ ಸಹಾಯ ಮಾಡಿದ್ದಾನೆ ಮತ್ತು ಭೂಗತ ದರೋಡೆಕೋರ ದಾವೂದ್ ಇಬ್ರಾಹಿಂನ ಡಿ-ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದ ಅಲ್ಲದೇ ಇತರ ಐಎಸ್‌ಐ ಏಜೆಂಟ್‌ಗಳಿಗೂ ಆಶ್ರಯ ನೀಡಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!