ಜಮ್ಮು ಕಾಶ್ಮೀರದ 11 ಕಡೆ ದಾಳಿ ನಡೆಸಿದ ಎನ್‌ಐಎ: ಪ್ರಮುಖ ದಾಖಲೆಗಳು ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಲಷ್ಕರ್-ಎ-ತೊಯ್ಬಾದ ಸಂಘಟನೆಯಾದ ಟಿಆರ್‌ಎಫ್‌ನ ಕಮಾಂಡರ್ ಸಜಾದ್ ಗುಲ್ ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಪ್ರೇರೇಪಿಸುವ ವಿಷಯದ ತನಿಖೆಗೆ ಸಂಬಂದಿಸಿದಂತೆ  ಜಮ್ಮು ಕಾಶ್ಮೀರದ ನಾಲ್ಕು ಕಡೆಗಳಲ್ಲಿ ಎನ್‌ ಐ ಎ ದಾಳಿ ನಡೆಸಿರುವುದಾಗಿ ಹೇಳಿದೆ.

ಶ್ರೀನಗರದಲ್ಲಿ 6 , ಬಾರಾಮುಲ್ಲದಲ್ಲಿ 2, ಅವಂತಿಪೋರಾ , ಬದ್ಗಾಮ್ ಮತ್ತು ಕುಲ್ಗಾಮ್ ಸೇರಿದಂತೆ 11 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ತಿಳಿಸಿದ್ದಾರೆ. ಇವುಗಳಲ್ಲಿ ಭಯೋತ್ಪಾದಕ ಬಸಿತ್ ಅಹ್ಮದ್ ದಾರ್ ಅವನ ಮನೆಯೂ ಸೇರಿದೆ. ಇತ್ತೀಚೆಗೆ ಅವನ ವಿರುದ್ಧ ಎನ್ಐಎ 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿತ್ತು.

ಈ ಸಂದರ್ಭದಲ್ಲಿ ಡಿಜಿಟಲ್ ಸಾಧನಗಳು, ಸಿಮ್ ಕಾರ್ಡ್‌ಗಳು, ಡಿಜಿಟಲ್ ಸ್ಟೋರೇಜ್ ಸಾಧನಗಳು ಮತ್ತು‌ ಕೆಲವು ದಾಖಲೆಗಳೂ ಸೇರಿದಂತೆ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲಷ್ಕರ್-ಎ-ತೈಬಾ ಮತ್ತು ದಿ ರೆಸಿಸ್ಟೆನ್ಸ್‌ಗೆ ಬೆಂಬಲ ನೀಡಲು ಪಾಕಿಸ್ಥಾನದಲ್ಲಿರುವ ಎಲ್‌ಇಟಿಯ ಇತರ ಸಹ ಕಮಾಂಡರ್‌ಗಳೊಂದಿಗೆ ಸೇರಿ ಸಾಜದ್ ಗುಲ್‌ ತನ್ನ ಅಕ್ರಮ ಚಟುವಟಿಗಳ ಸಂಯೋಜನೆ, ಸಮನ್ವಯ, ಶಸ್ತ್ರಾಸ್ತ್ರ ಸಾಗಣೆ ಮುಂತಾದವುಗಳಿಗೆ ಕೆಲಸರಗಾರರನ್ನು ನೇಮಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!