ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್ ಕೊಂಚ ಇಳಿಕೆ ಕಂಡಿದೆ. ಸತತ ಎರಡನೇ ದಿನವೂ ಒಂದೇ ಒಂದು ಪ್ರಕಣವೂ ವರದಿಯಾಗದ ಹಿನ್ನೆಲೆಯಲ್ಲಿ ನಿಫಾ ವೈರಸ್ ನಿಯಂತ್ರಣಕ್ಕೆ ಬಂದಿದೆ ಎಂದು ಕೇರಳ ಸರ್ಕಾರ ಪ್ರಕಟಿಸಿದೆ. ಸತತ ಎರಡನೇ ದಿನವೂ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಸೋಂಕಿತ ರೋಗಿಗಳ ಸ್ಥಿತಿ ಸದ್ಯ ಸುಧಾರಿಸುತ್ತಿರುವುದಾಗಿ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕೇರಳದಲ್ಲಿ ನಿಫಾ ವೈರಾಣು ಹರಡಿದೆ ಎಂಬ ಸುದ್ದಿ ಬಂದಾಗಿನಿಂದಲೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿದೆ ಎಂದರು. ಕೋಝಿಕ್ಕೋಡ್‌ನಲ್ಲಿ ನಿಫಾ ಪರಿಸ್ಥಿತಿ ಅವಲೋಕಿಸುವ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸೋಂಕಿತ ನಾಲ್ವರು ಚೇತರಿಸಿಕೊಳ್ಳುತ್ತಿದ್ದಾರೆ. ಒಂಬತ್ತು ವರ್ಷದ ಮಗು ಸೇರಿದಂತೆ ನಾಲ್ಕು ಸೋಂಕಿತ ರೋಗಿಗಳಿಗೆ ಈಗ ವೆಂಟಿಲೇಟರ್‌ಗಳಿಂದ ತೆಗೆದುಹಾಕಲಾಗಿದೆ ಎಂದರು.
ಪ್ರಸ್ತುತ, ನಿಪಾ ವೈರಸ್ ಸೋಂಕಿತರಿಗೆ ಮೊನೊಕ್ಲೋನಲ್ ಪ್ರತಿಕಾಯಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ವೈರಸ್ ವಿರುದ್ಧ ಹೋರಾಡಲು ಸರ್ಕಾರಕ್ಕೆ ಪ್ರಸ್ತುತ ಇರುವ ಏಕೈಕ ಅಸ್ತ್ರ ಇದಾಗಿದೆ. 36 ಬಾವಲಿಗಳ ಮಾದರಿಗಳನ್ನು ಪುಣೆಯಲ್ಲಿರುವ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ’ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಈ ಮೂಲಕ ಬಾವಲಿಗಳಿಗೂ ಈ ವೈರಸ್ ಇದೆಯೇ ಎಂದು ತಿಳಿಯಬಹುದು. ಇಲ್ಲಿಯವರೆಗೆ 1233 ಸೋಂಕಿತ ವ್ಯಕ್ತಿಗಳ ಸಂಪರ್ಕವನ್ನು ಗುರುತಿಸಲಾಗಿದೆ ಎಂದರು.
ಅವರಲ್ಲಿ 352 ಮಂದಿ ಹೈ ರಿಸ್ಕ್ ವಿಭಾಗದಲ್ಲಿದ್ದಾರೆ. ನಿಫಾ ವೈರಸ್‌ನ ಎರಡನೇ ಅಲೆ ಸದ್ಯಕ್ಕೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಪ್ರಸ್ತುತ ಇದು ಒಳ್ಳೆಯ ಸುದ್ದಿಯಾಗಿದ್ದು, ಜೀನೋಮಿಕ್ ಸೀಕ್ವೆನ್ಸಿಂಗ್ ಮೂಲಕವೂ ಇದನ್ನು ಸಾಬೀತುಪಡಿಸಬಹುದು ಎಂದು ಆರೋಗ್ಯ ಸಚಿವರು ಹೇಳಿದರು.