ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿಫಾ ವೈರಸ್ ಆತಂಕ ಶುರುವಾಗಿದೆ. ಕೇರಳ ಮೂಲದ ಯುವಕ ನಿಫಾ ವೈರಸ್ ಗೆ ಬಲಿಯಾಗಿದ್ದು, ಆತನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಬೆಂಗಳೂರಿನ ಓರ್ವರಲ್ಲಿ ನಿಫಾ ಸೋಂಕಿನ ಗುಣಲಕ್ಷಣ ಕಂಡುಬಂದಿದೆ.
ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದ ಮೃತ ಯುವಕನ ಸ್ನೇಹಿತರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಐಸೋಲೆಷನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ 41 ಜನರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.
41 ಸಂಪರ್ಕಿತರ ಪೈಕಿ ಓರ್ವರಲ್ಲಿ ನಿಫಾ ಗುಣಲಕ್ಷಣಗಳು ಕಂಡುಬಂದಿದ್ದು, ಅವರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, 41 ಜನರ ಮೇಲೆ ತೀವ್ರ ನಿಗಾವಹಿಸಿದೆ.