ಡಿಜೆ ಟಿಲ್ಲುಗಾಗಿ ಬರ್ತಾರಾ ಬ್ಯೂಟಿ ಕ್ವೀನ್‌ ಶ್ರೀಲೀಲಾ??

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡಿಜೆ ಟಿಲ್ಲು.. ತೆಲುಗು ಪ್ರೇಕ್ಷಕರಿಗೆ ಈ ಸಿನಿಮಾವನ್ನು ಹೆಸರು ಪರಿಚಯಿಸುವ ಅಗತ್ಯವಿಲ್ಲ. ಸಣ್ಣ ಸಿನಿಮಾ ಆಗಿ ಬಂದ ಡಿಜೆ ಟಿಲ್ಲು ಬಾಕ್ಸ್ ಆಫೀಸ್ ನಲ್ಲಿ ಸಿನಿಮಾದ ಯಶಸ್ಸು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರು ಥಿಯೇಟರ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಸಿನಿಮಾದ ನಾಯಕ ಸಿದ್ದು ಜೊನ್ನಲಗಡ್ಡ ಅವರ ಅಭಿನಯ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಇದರೊಂದಿಗೆ ಚಿತ್ರವು ವಾಣಿಜ್ಯಿಕವಾಗಿ ಕೂಡ ಯಶಸ್ವಿಯಾಯಿತು.

ಹೀಗಾಗಿ ಡಿಜೆ ಟಿಲ್ಲು-2 ಕೂಡ ಈ ಸಿನಿಮಾದ ಸೀಕ್ವೆಲ್ ಶುರುವಾಗಲಿದೆ. ಈ ಸೀಕ್ವೆಲ್‌ಗೆ ಯಂಗ್ ಬ್ಯೂಟಿ ಶ್ರೀಲೀಲಾ ಈ ಸಿನಿಮಾಗೆ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ ಎಂಬ ಸುದ್ದಿ ಇಂಡಸ್ಟ್ರಿ ವಲಯದಲ್ಲಿ ಕೇಳಿ ಬರುತ್ತಿದೆ. ಈ ಹಿಂದೆ ಡಿಜೆ ಟಿಲ್ಲು ಮೊದಲ ಭಾಗದಲ್ಲಿ ಚೆಲುವೆ ನೇಹಾ ಶೆಟ್ಟಿ ಅದ್ಬುತ ಅಭಿನಯ ನೀಡಿದ್ದರೂ ಈ ಬಾರಿ ನಾಯಕಿಯನ್ನು ಬದಲಾಯಿಸಿದರೆ ಉತ್ತಮ ಎಂದು ಚಿತ್ರತಂಡ ಯೋಚಿಸಿದ್ದು, ಈ ಚಿತ್ರದಲ್ಲಿ ಶ್ರೀಲೀಲಾ ಅವರನ್ನು ನಾಯಕಿಯಾಗಿ ತೆಗೆದುಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ.

ಶ್ರೀಲೀಲಾ ನಾಯಕರಿಯಾದರೆ ಚಿತ್ರಕ್ಕೆ ಹೊಸತನ ತಂದುಕೊಟ್ಟಂತಾಗುತ್ತದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಡಿಜೆ ಟಿಲ್ಲುವಿನಂಥ ಮಾಸ್ ಪಾತ್ರದ ಎದುರು ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದರೆ ನಾಯಕಿಗೆ ಹೆಚ್ಚು ಆ್ಯಕ್ಟಿಂಗ್ ಸ್ಕೋಪ್ ಇದೆ ಎಂದರ್ಥ. ಈ ಚಿತ್ರದ ಮೂಲಕ ಶ್ರೀಲೀಲಾ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುವುದು ಖಚಿತ ಎನ್ನುತ್ತಿವೆ ಚಿತ್ರ ಮೂಲಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!