100 ಪಾಯಿಂಟ್‌ ಕುಸಿದ ನಿಫ್ಟಿ: ಋಣಾತ್ಮಕವಾಗಿ ಆರಂಭಗೊಂಡ ಷೇರುಪೇಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದುರ್ಬಲ ಜಾಗತಿಕ ಸೂಚನೆಗಳ ನಡುವೆ ಶುಕ್ರವಾರ ದೇಶೀಯ ಷೇರು ಮಾರುಕಟ್ಟೆಗಳು ಕೆಳಮಟ್ಟಕ್ಕೆ ಕುಸಿದಿವೆ. ಫ್ರಂಟ್‌ಲೈನ್ ಸೂಚ್ಯಂಕಗಳು ನಿಫ್ಟಿ 50ಯು 100 ಪಾಯಿಂಟ್‌ ಕುಸಿದು 17,800 ಮಟ್ಟಗಳ ಕೆಳಗೆ ವ್ಯಾಪಾರ ನಡೆಸಿದರೆ ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 400 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದು 59,533 ಮಟ್ಟದಲ್ಲಿ ವಹಿವಾಟು ನಡೆಸಿತು.

ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಕೂಡಾ 0.3% ವರೆಗೆ ಕುಸಿದಿವೆ.

ಟಾಪ್‌ ಗೇನರ್ಸ್‌ ‍ ಟಾಪ್‌ ಲೂಸರ್ಸ್:

ಟೆಕ್ ಮಹೀಂದ್ರಾ, ಎಂ & ಎಂ, ವಿಪ್ರೋ, ಮಾರುತಿ ಸುಜುಕಿ, ಇನ್ಫೋಸಿಸ್, ಟಿಸಿಎಸ್, ಬೆಂಚ್‌ಮಾರ್ಕ್ ಸೂಚ್ಯಂಕಗಳಲ್ಲಿ ತೀವ್ರ ನಷ್ಟ ಅನುಭವಿಸಿವೆ.

ಸನ್ ಫಾರ್ಮಾ, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್ ಷೇರುಗಳು ಲಾಭಗಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!