Monday, October 2, 2023

Latest Posts

ರೈಲು ಕಿಟಕಿ ಮೂಲಕ ಫೋನ್ ಕದಿಯಲು ಯತ್ನಿಸಿದವನ ಕೈ ಹಿಡಿದುಕೊಂಡ ಪ್ರಯಾಣಿಕ: 10 ಕಿಮಿ ನೇತಾಡುತ್ತಾ ಸಾಗಿದ ಕಳ್ಳ! ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರೈಲು ಮತ್ತಿತರೆಡೆಗಳಲ್ಲಿ ಪ್ರಯಾಣಿಕರು ಕೊಂಚ ಅಜಾರೂಕರಾದರೆ ಸಾಕು ಅಲ್ಲಿಗೆ ಸುಳಿಯುವ ಕಳ್ಳರು ಕ್ಷಣಮಾತ್ರದಲ್ಲಿ ವಸ್ತುಗಳನ್ನು ಹಾರಿಸಿಕೊಂಡು ಪರಾರಿಯಾಗುತ್ತಾರೆ. ಬಿಹಾರ ರಾಜ್ಯದ ಪಾಟ್ನಾದಲ್ಲಿಯೂ ಹಾಗೆಯೇ ಆಗಿದೆ. ರೈಲು ಬೇಗುಸರಾಯ್‌ನಿಂದ ಖಗರಿಯಾಗೆ ಹೋಗುತ್ತಿದ್ದಾಗ ಸಾಹೇಬ್‌ಪುರ ಕಮಲ್ ನಿಲ್ದಾಣದ ಬಳಿ ಕಳ್ಳನೊಬ್ಬ ಕಿಟಕಿಯ ಮೂಲಕ ಕೈತೂರಿಸಿ ರೈಲಿನೊಳಗೆ ಕುಳಿತಿದ್ದ ಪ್ರಯಾಣಿಕನಿಂದ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದ್ದಾನೆ.
ಆದರೆ ಒಳಗೆ ಕುಳಿತಿದ್ದ ಪ್ರಯಾಣಿಕ ಕಳ್ಳನಿಗಿಂತ ಚಾಲಾಕಿಯಾಗಿದ್ದು, ಕಳ್ಳನ ಎರಡೂ ಕೈಗಳನ್ನು ಬಲವಾಗಿ ಹಿಡಿದುಕೊಂಡಿದ್ದಾನೆ!. ಅಷ್ಟರಲ್ಲಿ ರೈಲು ಸಹ ಹೊರಟಿದ್ದು ಕಂಗಾಲಾದ ಕಳ್ಳ ಚಲಿಸುತ್ತಿದ್ದ ರೈಲಿನ ಹೊರಗೆ ತೂಗಾಡುತ್ತಾ, ಕ್ಷಮೆಯಾಚಿಸುತ್ತಾ, ತನ್ನನ್ನು ಬದುಕಲು ಬಿಡುವಂತೆ ಅಂಗಲಾಚಿದ್ದಾನೆ. ಸುಮಾರು 10 ಕಿಮಿಗಳಷ್ಟು ದೂರ ಕಳ್ಳ ರೈಲಿನ ಕಿಟಕಿ ಬದಿಯಲ್ಲಿ ನೇತಾಡುತ್ತಾ ಪ್ರಯಾಣಿಸಿದ್ದಾನೆ. ಕೊನೆಗೆ ಖಗರಿಯಾ ನಿಲ್ದಾಣದ ಬಳಿ ಆತನನ್ನು ಬಿಡಲಾಯಿತು. ತಕ್ಷಣವೇ ಆತ ಓಡಿ ಹೋಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಘಟನೆ ಸೆ.14 ರಂದು ನಡೆದಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಂಡಿದ್ದಾರೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!