133 ಪಾಯಿಂಟ್‌ ಕುಸಿದ ನಿಫ್ಟಿ: ಕೆಂಪುಬಣ್ಣದಲ್ಲಿದೆ ಷೇರುಪೇಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಯುಎಸ್‌ ಫೆಡರಲ್‌ ಬ್ಯಾಂಕ್‌ ರಾತ್ರೋರಾತ್ರಿ ತನ್ನ ಬೆಂಚ್‌ ಮಾರ್ಕ್‌ ದರವನ್ನು ಮೊತ್ತೊಮ್ಮೆ 75 ಬಿಪಿಎಸ್‌ ಹೆಚ್ಚಿಸಿರುವುದರಿಂದ ಭಾರತೀಯ ಷೇರುಮಾರುಕಟ್ಟೆಗಳೂ ಕೂಡ ಅಲುಗಾಡಿವೆ.

ಗುರುವಾರ ಬೆಳಿಗ್ಗೆ ಸೆನ್ಸೆಕ್ಸ್ 370.75 ಪಾಯಿಂಟ್ ಅಥವಾ 0.62 ಶೇಕಡಾ ಕುಸಿದು 59086.03 ಕ್ಕೆ ಇಳಿದಿದೆ ಮತ್ತು ನಿಫ್ಟಿ50 ಯು 133.80 ಪಾಯಿಂಟ್ ಅಥವಾ 0.76 ರಷ್ಟು ಕುಸಿದು 17584.50 ಕ್ಕೆ ತಲುಪಿದೆ. ಸುಮಾರು 776 ಷೇರುಗಳು ಮುನ್ನಡೆ ಸಾಧಿಸಿವೆ, 1013 ಷೇರುಗಳು ನಷ್ಟ ಅನುಭವಿಸಿವೆ. 114 ಷೇರುಗಳು ಯಥಾ ಸ್ಥಿತಿಯಲ್ಲಿವೆ.

ನಿಫ್ಟಿಯಲ್ಲಿ ಪವರ್ ಗ್ರಿಡ್ ಕಾರ್ಪ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಮತ್ತು ಟೆಕ್ ಮಹೀಂದ್ರಾ ಪ್ರಮುಖ ಲಾಭ ಗಳಿಸಿದರೆ, ಅದಾನಿ ಪೋರ್ಟ್ಸ್, ಐಟಿಸಿ, ಭಾರ್ತಿ ಏರ್‌ಟೆಲ್, ಎಚ್‌ಯುಎಲ್ ಮತ್ತು ನೆಸ್ಲೆ ಇಂಡಿಯಾ ಅಗ್ರ ಲಾಭ ಗಳಿಸಿದೆ.

ನಿಫ್ಟಿ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.1 ರಷ್ಟು ಕುಸಿದಿದ್ದರಿಂದ ವಿಶಾಲ ಮಾರುಕಟ್ಟೆಗಳಲ್ಲಿಯೂ ದೌರ್ಬಲ್ಯವುಂಟಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!