Saturday, April 1, 2023

Latest Posts

ರಾಜ್ಯದ ಜನತೆಗೆ ಗುಡ್ ನ್ಯೂಸ್:‌ ಜ.31ರಿಂದ ನೈಟ್‌ ಕರ್ಪ್ಯೂ ರದ್ದು, ಶಾಲೆ ಪುನಾರಂಭಕ್ಕೆ ಗ್ರೀನ್‌ ಸಿಗ್ನಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿದ್ದ ನಿರ್ಬಂಧನೆಗಳನ್ನು ತೆಗೆದುಹಾಕಲಾಗಿದೆ.
ಕೋವಿಡ್‌ ಪರಿಸ್ಥಿತಿ ಬಗ್ಗೆ ಇಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಆರ್.‌ ಅಶೋಕ್‌ ಮಾಹಿತಿ ನೀಡಿದ್ದಾರೆ.

ಜ.31ರಿಂದ ರಾಜುದಲ್ಲಿ ನೈಟ್‌ ಕರ್ಫ್ಯೂ ರದ್ದು ಮಾಡಲಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ.

 • ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಶಾಲೆಗಳಲ್ಲಿ ಭೌತಿಕ ತರಬೇತಿ ಆರಂಭವಾಗಲಿದೆ.
 • ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ
 • ಹೊಟೇಲ್, ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಶೇ.100ರಷ್ಟು ಭರ್ತಿಗೆ ಅನುಮತಿ.
 • ಜಿಮ್, ಥಿಯೇಟರ್, ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಶೇ.50ರಷ್ಟು ಆಸನ.
 • ಧಾರ್ಮಿಕ ಸ್ಥಳಗಳಲ್ಲಿ, ಭಕ್ತರು ಒಂದು ಬಾರಿಗೆ 50 ಜನರೊಂದಿಗೆ ಸೇವೆಯಲ್ಲಿ ಪಾಲ್ಗೊಳ್ಳಬಹುದು.
 • ಜಾತ್ರೆ, ರ್ಯಾಲಿ, ಧರಣಿ, ಪ್ರತಿಭಟನೆ, ಸಾಮಾಜಿಕ ಸಭೆ, ಧಾರ್ಮಿಕ ಸಭೆ ನಿಷೇಧ.
 • ಸರ್ಕಾರಿ ಕಚೇರಿಗಳಲ್ಲಿ ಶೇ.100ರಷ್ಟು ನೌಕರರ ಕೆಲಸಕ್ಕೆ ಅವಕಾಶ.
 • ಸಾರ್ವಜನಿಕ ಸಾರಿಗೆಯಲ್ಲಿ ಸೀಟಿಂಗ್‌ ಕ್ಯಪಾಸಿಟಿಯಷ್ಟೆ ಭರ್ತಿ ಮಾಡಲು ಅವಕಾಶ.
 • ಮಂದಿರ, ಮಸೀದಿ, ಚರ್ಚ್‌ ಗಳಲ್ಲಿ ಪೂಜೆ, ಪ್ರಾರ್ಥನೆ ಆರಂಭ.
 • ಧಾರ್ಮಿಕ ಕ್ಷೇತ್ರಗಳಿಗೆ 50 ಮಂದಿಗೆ ಪ್ರವೇಶ ಮಿತಿ( ಒಂದು ಬಾರಿಗೆ).
 • ಮದುವೆ ಹಾಲ್‌ ನಲ್ಲಿ 300ಜನರಿಗೆ ಅವಕಾಶ.
 • ಒಳಾಂಗಣ ಸಮಾರಂಭಕ್ಕೆ 200ಜನರ ಮಿತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!