August 3, 2026
Monday, August 3, 2026
spot_img

15 ದಿನಗಳ ಹಿಂದೆಯಷ್ಟೇ ಮಂಗಳಾದೇವಿ ದರುಶನ ಪಡೆದಿದ್ದ ‘ಗಾನ ಕೋಗಿಲೆ’ ಜಾನಕಮ್ಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಎಸ್‌ ಜಾನಕಿ (88) ಅವರು ವಿಧಿವಶರಾಗಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಬರೋಬ್ಬರಿ 48 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದ ಈ ಗಾನ ಕೋಗಿಲೆಯ ನಿರ್ಗಮನದಿಂದಾಗಿ ಸಂಗೀತ ಲೋಕದಲ್ಲಿ ಕತ್ತಲು ಆವರಿಸಿದೆ. ಇವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರಾವಳಿ ಭೇಟಿಯೇ ಕೊನೆಯ ಪಯಣವಾಯಿತೇ?

ಅಚ್ಚರಿಯ ವಿಷಯವೆಂದರೆ, ತಾವಿನ್ನು ನೆನಪು ಮಾತ್ರ ಎಂದು ಮರೆಯಾಗುವ ಕೇವಲ ಹದಿನೈದು ದಿನಗಳ ಮುಂಚೆಯಷ್ಟೇ ಅವರು ಕರಾವಳಿ ಪ್ರವಾಸ ಕೈಗೊಂಡಿದ್ದರು. ಮಂಗಳೂರಿನ ಪ್ರಸಿದ್ಧ ಮಂಗಳಾದೇವಿ ಸನ್ನಿಧಿಗೆ ಹಾಗೂ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಅವರ ಆ ಭೇಟಿಯೇ ಕೊನೆಯ ನೆನಪಾಗಿ ಉಳಿದಿದೆ.

ಕಂಬನಿ ಮಿಡಿದ ಕಲಾ ಜಗತ್ತು ಮತ್ತು ರಾಜಕೀಯ ವಲಯ

ತಮ್ಮ ಸುಮಧುರ ಧ್ವನಿಯ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದ ಜಾನಕಮ್ಮ ಅವರ ಅಗಲಿಕೆಗೆ ಇಡೀ ಚಿತ್ರೋದ್ಯಮ ಶೋಕ ಸಾಗರದಲ್ಲಿ ಮುಳುಗಿದೆ. ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ ದಿಗ್ಗಜರು ಹಾಗೂ ದೇಶದ ಪ್ರಮುಖ ರಾಜಕಾರಣಿಗಳು, ಜಾನಕಿ ಅವರ ಸಾಧನೆಯನ್ನು ಸ್ಮರಿಸಿ ಸಂತಾಪ ಸೂಚಿಸಿದ್ದಾರೆ. ತಲೆಮಾರುಗಳ ಕಾಲ ರಂಜಿಸಿದ ಆ ದಿವ್ಯ ಧ್ವನಿ ಸದಾಕಾಲ ಜೀವಂತವಾಗಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !