ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾಧ್ಯಕ್ಷರಾಗಿ ನಿಖಿಲ್ ಕುಮಾರಸ್ವಾಮಿ ನೇಮಕ ವಿಚಾರ ಜೆಡಿಎಸ್ ನಲ್ಲಿ ಅಸಮಾಧಾನ ಮೂಡಿಸಿದೆ. ನಿಖಿಲ್ ಪಟ್ಟಕ್ಕೆ ಪಕ್ಷದ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷ ಸಂಘಟನೆಯ ಹೊಸ ಸೂತ್ರವನ್ನು ನಾಯಕರಿಗೆ ನೀಡಲಾಗಿದೆ ಎಂಬ ಚರ್ಚೆ ಪಕ್ಷದೊಳಗೆ ಶುರುವಾಗಿದೆ.
ಸಂಕ್ರಾಂತಿ ನಂತರ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನಿಖಿಲ್ ಕುಮಾರಸ್ವಾಮಿ ನೇಮಕ ವಿಚಾರ ಪಕ್ಷದೊಳಗೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ನಿಖಿಲ್‌ಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಜೆಡಿಎಸ್‌ನ ಹಿರಿಯ ನಾಯಕರು ಕೊಂಚ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ರಾಜಕೀಯದಲ್ಲಿ ಹೆಚ್ಚು ಅನುಭವ ಇಲ್ಲದ ನಿಖಿಲ್ ನಾಯಕತ್ವದಲ್ಲಿ ಕೆಲಸ ಮಾಡುವುದು ಕೆಲ ಹಿರಿಯರಿಗೆ ಇಷ್ಟವಿಲ್ಲ. ನಿಖಿಲ್ ಕುಮಾರಸ್ವಾಮಿ ರಾಜ್ಯಾಧ್ಯಕ್ಷ ಸ್ಥಾನವನ್ನೂ ಗೆದ್ದರೆ ಪಕ್ಷಕ್ಕೆ ಮತ್ತೊಮ್ಮೆ ಕುಟುಂಬ ರಾಜಕಾರಣ ಎಂಬ ಹಣೆಪಟ್ಟಿ ಬರಲಿದೆ. ಇದನ್ನ ಹೊರತುಪಡಿಸಿ ಪಕ್ಷ ಸಂಘಟನೆಗೆ ಹೊಸ ಸೂತ್ರವನ್ನ ದೇವೇಗೌಡ, ಕುಮಾರಸ್ವಾಮಿ ಮುಂದೆ ಹಿರಿಯ ನಾಯಕರು ಇಟ್ಟಿದ್ದಾರೆ ಎನ್ನಲಾಗಿದೆ.