ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ ಕಾನೂನು ರದ್ದಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ವಕ್ಫ್ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ಎರಡನೇ ಹಂತದ ಹೋರಾಟದ ಬಗ್ಗೆ ನಾಳೆಯ ಸಭೆಯಲ್ಲಿ ಚರ್ಚಿಸುತ್ತೇವೆ ಎಂದರು.
ನಮ್ಮದು ಜನಪರ ಆಂದೋಲನ. ವಕ್ಫ್ ಆಸ್ತಿ ಎಂದು ಅವರು 3 ಪಾಕಿಸ್ತಾನ ಮಾಡುವ ಅಷ್ಟು ಜಾಗವನ್ನು ಕ್ರೈಮ್ ಮಾಡುತ್ತಿದ್ದಾರೆ. ವಕ್ಫ್ ಕಾನೂನು ರದ್ದು ಮಾಡಬೇಕು ಎಂಬ ಉದ್ದೇಶದಿಂದ ನಾವು ಹೋರಾಟ ಮಾಡುತ್ತಿದ್ದೇವೆ. ವಕ್ಫ್ ಆಸ್ತಿ ಇದು ನಮ್ಮ ಆಸ್ತಿ, ಹಿಂದೂಗಳ ಆಸ್ತಿ ಎಂದು ತಿಳಿಸಿದ್ದಾರೆ.