ಹರ್ಷ ಹತ್ಯೆ ಖಂಡಿಸಿ ಹಿಂದು ಪರ ಸಂಘಟನೆಗಳಿಂದ ಪ್ರತಿಭಟನೆ

ಹೊಸದಿಗಂತ ವರದಿ, ಮಂಡ್ಯ:

ಶಿವಮೊಗ್ಗದಲ್ಲಿ ಭಾನುವಾರ ಬಜರಂಗದಳದ ಕಾರ‌್ಯಕರ್ತ ಹರ್ಷ ಹತ್ಯೆ ಪ್ರಕರಣವನ್ನು ಖಂಡಿಸಿ ಆರೋಪಿಗಳ ಬಂಧನ ಹಾಗೂ ಮುಸ್ಲೀಂ ಮೂಲಭೂತವಾದಿ ಸಂಘಟನೆಯನ್ನು ನಿಷೇದಿಸುವಂತೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ ಕಾರ‌್ಯಕರ್ತರು, ಹೆದ್ದಾರಿ ಮಾರ್ಗವಾಗಿ ಜೆ.ಸಿ. ವೃತ್ತಘಿ, ಆರ್.ಪಿ. ರಸ್ತೆ, ಕೆ.ಆರ್.ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಎಸ್‌ಡಿಪಿಐನ ಪೈಶಾಚಿಕ ಮುಖವನ್ನು ಮತ್ತೊಮ್ಮೆ ಬಯಲು ಮಾಡಿದೆ. ರಾಜ್ಯದಲ್ಲಿ ನಿರಂತರವಾಗಿ ಹಿಂದೂಪರ ಸಂಘಟನೆಗಳ ಕಾರ‌್ಯಕರ್ತರ ಹತ್ಯೆಯಾಗುತ್ತಿದ್ದುಘಿ, ಇದೆಲ್ಲದರ ಹಿಂದೆ ಮುಸ್ಲೀಂ ಮೂಲಭೂತವಾದಿ ಸಂಘಟನೆಗಳ ಪಾತ್ರ ಇರುವುದು ಹಲವಾರು ಬಾರಿ ಸಾಬೀತಾಗಿದೆ ಎಂದು ದೂರಿದರು.
ಹರ್ಷನ ಹತ್ಯೆ ಪೂರ್ವ ನಿಯೋಜಿತವಾಗಿದ್ದುಘಿ, ಉದ್ದೇಶಪೂರ್ವಕವಾಗಿಯೇ ಕೊಲೆ ನಡೆದಿದೆ. ರಾಜ್ಯದಲ್ಲಿ ಹಿಂದೂಗಳನ್ನು ಬಜರಂಗದಳದ ಕಾರ‌್ಯಕರ್ತರನ್ನು ಕೊಲೆ ಮಾಡುತ್ತಿರುವವರ ವಿರುದ್ಧ ತಿರುಗಿ ಬೀಳುವ ಕಾಲ ಬಂದಿದೆ. ಶಾಂತ ಭಾವನೆಯಿಂದ ಇರುವ ಹಿಂದೂಗಳನ್ನು ಕೆಣಕಿದರೆ ಏನಾಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯುತ್ತದೆ. ರಾಜ್ಯ ಸರ್ಕಾರವೂ ಹಿಂದೂಗಳ ರಕ್ಷಣೆಗೆ ಅಗತ್ಯ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!