ಗವಿ ಗಂಗಾಧರೇಶ್ವರ ದೇವಾಲಯದ ಪ್ರಾಚೀನತೆ ಬಗ್ಗೆ ನಿರ್ಮಲಾ ಸೀತಾರಾಮನ್ ಹಂಚಿಕೊಂಡ ಮಾಹಿತಿ ಇದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಜ್ಯಸಭಾ ಕ್ಷೇತ್ರಕ್ಕೆ ಕರ್ನಾಟಕದ ಬಿಜೆಪಿ ಅಭ್ಯರ್ಥಿಯಾಗಿ ನಿರ್ಮಲಾ ಸೀತಾರಾಮನ್‌ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಸಚಿವೆ ನಿರ್ಮಲಾ ಸೀತಾರಾಮನ್‌ ಬೆಂಗಳೂರಿನ ಪ್ರಖ್ಯಾತ ದೇಗುಲವಾದ ಗವಿಗಂಗಾಧರೇಶ್ವರ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ, ದೈವದ ದರ್ಶನ ಪಡೆದರು.
ಆ ಬಳಿಕ ಗೋಸಾಯಿ ಮಹಾಸಂಸ್ಥಾನ ಮಠಕ್ಕೂ ಭೇಟಿ ನೀಡಿದ್ದರು. ಈ ವಿಚಾರವಾಗಿ ಟ್ವಿಟರ್‌ ಮಾಹಿತಿ ಹಂಚಿಕೊಂಡಿರುವ ನಿರ್ಮಲಾ ಸೀತಾರಾಮನ್‌, ಮಹತ್ವದ ಕಾರ್ಯಕ್ಕೆ ಮುಂದಾಗುವ ಮೊದಲು ಈ ಮುಂಚಿನಂತೆ ಗವಿಗಂಗಾಧರೇಶ್ವರ ಸ್ವಾಮಿಯ ಆಶೀರ್ವಾದ ಪಡೆದೆ. ಇದೊಂದು 9 ನೇ ಶತಮಾನಕ್ಕೆ ಸೇರಿದ ಪುರಾತನವಾದ ಗುಹಾ ದೇವಾಲಯ.
ʼಚಿತ್ರಕಾರರಾದ ಥಾಮಸ್ ಮತ್ತು ವಿಲಿಯಂ ಡೇನಿಯಲ್ 1786-1794 ರ ಕಾಲಘಟ್ಟದಲ್ಲಿ ಬಿಡಿಸಿರುವ ರೇಖಾಚಿತ್ರಗಳಲ್ಲಿ ದೇಗುಲದ ಆವರಣದಲ್ಲಿ ತ್ರಿಶೂಲ ಮತ್ತು ಚಕ್ರದಂತಹ ರಚನೆಗಳಿರುವುದು ಕಂಡುಬರುತ್ತದೆ. ಅಲ್ಲದೆ ಆ ಸಂದರ್ಭದಲ್ಲಿ ʼಲಕ್ಷ್ಮೀನಾರಾಯಣನ ದೇವಾಲಯವು ಬೆಂಗಳೂರು ನಗರದ ಭಾಗವಾಗಿತ್ತು ಎಂಬ ವಿಚಾರವೂ ತಿಳಿದುಬರುತ್ತದೆʼ ಎಂದು ಬರೆದಿದ್ದಾರೆ.

ದೇಗುಲಕ್ಕೆ ಭೇಟಿನೀಡಿದ್ದಲ್ಲದೆ, ಅದರ ಪ್ರಾಚೀನತೆಯನ್ನು ಪ್ರಚುರಪಡಿಸುತ್ತಿರುವುದಕ್ಕೆ ನಿರ್ಮಲಾ ಟ್ವಿಟ್‌ ಅನ್ನು ಮೆಚ್ಚಿಕೊಂಡು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!